ಚಿತ್ರದುರ್ಗ :  ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ನೆಹರೂ ಮೈದಾನದಲ್ಲಿ ದೀಪ ಬೆಳಗುವ ಮೂಲಕ ‘ಪ್ರಜಾಸೇವೆ’ ಅಭಿಯಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ಸರ್ಕಾರವೇ ಜನರ ಬಳಿಗೆ ತೆರಳಿ, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.  ಜನರ ಅಗತ್ಯಗಳಿಗೆ ಆಡಳಿತ ಸ್ಪಂದಿಸಬೇಕು, ಜನಸಾಮಾನ್ಯರಿಗೂ ಸರ್ಕಾರಕ್ಕೂ ನಡುವಿನ ಅಂತರ ಕಡಿಮೆಯಾಗಬೇಕು. ಜನರ ವಿಶ್ವಾಸಕ್ಕೆ ತಕ್ಕಂತೆ ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿದೆ ಎಂದರು.ಬರಪೀಡಿತ ಹಿರಿಯೂರು ಕ್ಷೇತ್ರದ ಜನರ ಕಷ್ಟ ಕೇಳಲು ಕೇಂದ್ರ ಸರ್ಕಾರ  ಅನುದಾನ ನೀಡಿಲ್ಲ. ನಿಮ್ಮ ಕಷ್ಟಗಳನ್ನು ನಾವೇ ಕೇಳಬೇಕು, ಪರಿಹಾರ ಕೊಡಬೇಕು. ಬರದ ನಾಡಿಗೆ ನೀರು ಕೊಡುವ ಕೆಲಸವನ್ನ ಬಿಜೆಪಿ ಮತ್ತು ಜೆಡಿಎಸ್‌ನವರು ಮಾಡಿದ್ದರೆ ಅವರಿಗೆ ಶರಣಾಗುತ್ತಿದ್ದೆ ಎಂದರು.ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ಖಾಲಿ ಡಬ್ಬದಂತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಏನು ಮಾತನಾಡಿಲ್ಲ, ಅನುದಾನವನ್ನೂ ತಂದಿಲ್ಲ. ನಾನು ಅಭಿವೃದ್ಧಿ ಮಾಡಿಲ್ಲ ಎಂದಾದ್ರೆ ಜನರು ನನ್ನನ್ನು ಪ್ರಶ್ನಿಸಲಿ ಎಂದರು.ಈ ಸಂದರ್ಭದಲ್ಲಿ ಸಚಿವ    ರಘುಮೂರ್ತಿ,   ಜಮೀರ್ ಅಹ್ಮದ್‌ ಖಾನ್,   ಎನ್. ಚಲುವರಾಯಸ್ವಾಮಿ,   ಹೆಚ್.ಸಿ.ಬಾಲಕೃಷ್ಣ, ರಾಜ್ಯಸಭಾ ಸದಸ್ಯರಾದ  ಜಿ.ಸಿ.ಚಂದ್ರಶೇಖರ್, ಶಾಸಕರಾದ  ಹೆಚ್‌.ಡಿ. ರಂಗನಾಥ್,   ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ,   ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯರಾದ   ಡಿ.ಟಿ. ಶ್ರೀನಿವಾಸ್, ಮಾಜಿ ಸಂಸದರಾದ   ಬಿ.ಎನ್. ಚಂದ್ರಪ್ಪ, ಮಾಜಿ ಸಚಿವರಾದ   ಹೆಚ್. ಆಂಜನೇಯ, ಮಾಜಿ ಶಾಸಕರಾದ   ಪೂರ್ಣಿಮಾ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ   ಸುಹಾಸ್ ಸುಧಾಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.