ರೈತರ ಅಡವಿಟ್ಟ ಚಿನ್ನಾಭರಣ ತಕ್ಷಣ ವಾಪಸ್ ನೀಡಲು ಆಗ್ರಹ
10 ದಿನಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ನಿರಂತರ ಹೋರಾಟದ ಎಚ್ಚರಿಕೆ

ಚಾಮರಾಜನಗರ : ಮಲ್ಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರ ಚಿನ್ನಾಭರಣಗಳನ್ನು ಅನಧಿಕೃತವಾಗಿ ಗಿರವಿ ಇಟ್ಟುಕೊಂಡಿರುವುದನ್ನು ಖಂಡಿಸಿ, ಅವುಗಳನ್ನು ತಕ್ಷಣ ರೈತರಿಗೆ ವಾಪಸ್ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪಟ್ಟಣದ ಸತ್ತಿ ರಸ್ತೆಯಲ್ಲಿರುವ ಮಣಪ್ಪುರಂ ಫೈನಾನ್ಸ್ ಕಂಪನಿ ಎದುರು ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಮಲ್ಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ಸೇರಿದ ಚಿನ್ನಾಭರಣಗಳನ್ನು ಅನಧಿಕೃತವಾಗಿ ಗಿರವಿ ಇಡಲಾಗಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಚಿನ್ನಾಭರಣಗಳನ್ನು ತಕ್ಷಣ ವಾಪಸ್ ನೀಡುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಇನ್ನೂ ಹತ್ತು ದಿನಗಳೊಳಗೆ ಸಮಸ್ಯೆಯನ್ನು ಬಗೆಹರಿಸಿ ರೈತರ ಚಿನ್ನಾಭರಣಗಳನ್ನು ಹಿಂದಿರುಗಿಸದಿದ್ದರೆ, ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಮಣಪ್ಪುರಂ ಫೈನಾನ್ಸ್ ಕಂಪನಿಗೆ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ, ಮಲ್ಲಿಯೂರು ಮಹೇಂದ್ರ, ಅಂಗಡಿ ಸತೀಶ್, ಕಿಲ್ಲಿಪುರ ಶ್ರೀಕಂಠ, ಗುರುವಿನಪುರ ಚಂದ್ರಪ್ಪ, ಸ್ಯಾಂಡಳ್ಳಿ ನಾಗರಾಜಪ್ಪ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.
ಸಂಬಂಧಿತ ವಿಡಿಯೊ / Watch video
ಸಂಬಂಧಿತ ಸುದ್ದಿಗಳು

ತುಳಸಿ ಗಿಡವು ಪವಿತ್ರತೆಯ ಸಂಕೇತ : ಸುರೇಶ್. ಎನ್ .ಋಗ್ವೇದಿ
ಚಾಮರಾಜನಗರ : ತುಳಸಿ ಗಿಡವು ಪವಿತ್ರತೆಯ ಸಂಕೇತ. ಭಾರತೀಯ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅಪಾರ ಗೌರವ, ಭಕ್ತಿ, ನಂಬಿಕೆ ಮತ್ತು ಮ…
◷ 22/11/2026
ಆರೋಗ್ಯ ಮಾಹಿತಿ ತಲುಪಿಸುವಲ್ಲಿ ಬಹುಭಾಷಾ ಎಐ (AI) ಮಹತ್ವದ ಪಾತ್ರ : ಭಾಷಿಣಿ ಸಿಇಒ ಅಮಿತಾಬ್ ನಾಗ್
ನವದೆಹಲಿ : ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನವನ್ನು ಸುಧಾರಿಸುವ ಮೂಲಕ, ವೈದ್ಯಕೀಯ ದಾಖಲೆಗಳನ್ನು ಸರಳಗೊಳಿಸುವ ಮೂಲಕ ಹಾಗೂ ಆರೋ…
◷ 22/11/2026
ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಗುರಿ: ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರ ಮೊದಲ ಅಧಿಕೃತ ಭಾರತ ಭೇಟಿ
ನವದೆಹಲಿ : ಮಾರ್ಚ್ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ತಮ್ಮ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿಗಾ…
◷ 22/11/2026
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ₹22,400 ಕೋಟಿ ನೆರವು ನೀಡುವಂತೆ ಮನವಿ : ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
ಬೆಂಗಳೂರು : ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು ರಾಜ್ಯದ ರೈತರ ಹಿತದೃಷ್ಟಿಯ…
◷ 22/11/2026
