ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸದೆ ತ್ವರಿತಗತಿಯಲ್ಲಿ ಕೆಲಸ ಮಾಡಿ ಇತ್ಯರ್ಥಪಡಿಸಿ : ಶಾಸಕ ಜಿ.ಟಿ.ದೇವೇಗೌಡ ಸೂಚನೆ

ಮೈಸೂರು: ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸದೆ ತ್ವರಿತಗತಿಯಲ್ಲಿ ಕೆಲಸ ಮಾಡಿ ಇತ್ಯರ್ಥಪಡಿಸಬೇಕು. ಅಧಿಕಾರಿಗಳು ಸೇವೆಯಲ್ಲಿ ಮಾಡಿದ ಕಾರ್ಯವನ್ನು ಜನರು ಸದಾ ನೆನಪಿಸಿಕೊಳ್ಳಲಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾರ್ವಜನಿಕರಿಗೆ ಅನುಕೂಲವಾಗಲೆಂದು ರಾಜ್ಯಸರ್ಕಾರ ಮೊದಲನೇ ಮತ್ತು ಮೂರನೇ ಶನಿವಾರ ಪ್ರಜಾಸೇವೆ ಆಯೋಜಿಸಲು ನಿರ್ಧರಿಸಿದ್ದು, ಕ್ಷೇತ್ರದ ದೊಡ್ಡಮಾರಗೌಡನಹಳ್ಳಿಯಲ್ಲಿ ನಡೆಸಲಾಗುತ್ತಿದೆ ಎಂದರು. ಕಂದಾಯ,ಕೃಷಿ,ನೀರಾವರಿ,ಗ್ರಾಮೀಣಾಭಿವೃದ್ದಿ,ಅರಣ್ಯ, ವಿದ್ಯುತ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಿ ತಮ್ಮ ಕೆಲಸ ಮಾಡಿಕೊಡುತ್ತಾರೆ. ಗ್ರಾಮಸ್ಥರು ತಾಳ್ಮೆಯಿಂದ ಅರ್ಜಿಗಳನ್ನು ಸಲ್ಲಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕು ಎಂದರು. ಅಧಿಕಾರಿಗಳು ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು ಸಾಧ್ಯವಾದರೆ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಇಷ್ಟು ದಿನಗಳೊಳಗೆ ಮಾಡಿಕೊಡುವ ಮಾತನ್ನು ಹೇಳಬೇಕು. ಸಣ್ಣ ಸಣ್ಣ ಕೆಲಸಗಳಿಗೂ ಕಚೇರಿಗೆ ಅಲೆಯುವಂತೆಮಾಡಬಾರದು. ಸರ್ಕಾರಿ ಸೇವೆಯಲ್ಲಿನಾವು ಮಾಡುವ ಸೇವೆಯು ಜನರ ಪರವಾಗಿದ್ದರೆ ಸದಾ ನೆನೆಯತ್ತಾರೆ ಎನ್ನುವುದನ್ನು ಅರಿಯಬೇಕು ಎಂದರು. ರಸ್ತೆಯ ಅಂಚಿನಲ್ಲಿ ಗಿಡಗಳನ್ನು ತೆಗೆಸುವುದು, ರಸ್ತೆ ನಿರ್ಮಾಣ ಮಾಡುವುದಕ್ಕೆ ಗಮನಹರಿಸಲಾಗುವುದು. ಗ್ರಾಮಸ್ಥರು ಹೇಳಿರುವ ಅನೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾಸೇವೆಗೆ ಜಿಲ್ಲಾಧಿಕಾರಿ ಅವರು ಬರಲು ಒಪ್ಪಿಕೊಂಡಿದ್ದರು. ಆದರೆ, ಹೆಚ್.ಡಿ.ಕೋಟೆಯಲ್ಲಿ ನಗರಾಭಿವೃದ್ದಿ ಸಚಿವರ ಕಾರ್ಯಕ್ರಮಕ್ಕೆ ಹೋಗಿರುವ ಕಾರಣ ಬಂದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳನ್ನು ಕರೆತಂದು ಮಾಡಿಸಲಾಗುವುದು. ಈ ಭಾಗದಲ್ಲಿ ಬದಲಾವಣೆ ಕಾಣಬೇಕು ಎನ್ನುವಂತೆ ಮಾಡಲಾಗುವುದು ಎಂದರು. ದುರಸ್ತಿ,ಖಾತೆ,ಸರ್ವೆ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿಗಳು ಬಂದಾಗ ಗ್ರಾಮ ಆಡಳಿತಾಧಿಕಾರಿ,ರಾಜಸ್ವ ನಿರೀಕ್ಷಕರು,ಉಪ ತಹಶೀಲ್ದಾರ್ ಅವರು ನಮ್ಮದಲ್ಲ ಎನ್ನುವ ಮಾತನಾಡದೆ ಒಟ್ಟಿಗೆ ಸೇರಿಕೊಂಡು ಪರಿಹರಿಸಬೇಕು.ತಹಶೀಲ್ದಾರ್ ಅವರಿಗೆ ಸರ್ವೆ ನಂಬರ್ ಕೊಟ್ಟರೆ ಯಾವ ಕಡೆ ಇದೆ ಎನ್ನುವಂತೆ ಹೇಳುತ್ತಾರೆ. ಅಂತಹ ರೀತಿಯಲ್ಲಿ ಆರ್ಐಗಳು ತಯಾರಾಗಬೇಕು ಎಂದು ಸಲಹೆ ನೀಡಿದರು.ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡ್ಗಳನ್ನಾಗಿ ಮಾಡಿರುವುದರಿಂದ ಅಂತಹ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ ಮತ್ತೊಮ್ಮೆ ಬಿಪಿಎಲ್ ಕಾರ್ಡ್ ಮಾಡಿಕೊಡಬೇಕು. ವಿಧವಾ ವೇತನ, ವೃದ್ಯಾಪ ವೇತನ, ವಿಶೇಷ ಚೇತನರ ಪಿಂಚಣಿ ಹಣ ಕೆಲವರಿಗೆ ನಿಂತು ಹೋಗಿರುವುದರಿಂದ ನೂರಾರು ರೂಪಾಯಿ ಖರ್ಚುಮಾಡಿಕೊಂಡು ಬರುತ್ತಾರೆ. ಅನೇಕರು ನಮ್ಮ ಮನೆಗೆ ಬಂದು ಹೇಳಿಕೊಂಡಾಗ ನಾನೇ ಮಾತನಾಡಿ ಪರಿಹರಿಸುವಂತೆ ಮಾಡಿದ್ದೇನೆ. ಇಂತಹ ಸಣ್ಣ ಕೆಲಸಗಳಿಗೆ ವಾರಗಟ್ಟಲೆ ಅಲೆಸಬಾರದು ಎಂದರು.ಇಲವಾಲ ಗ್ರಾಮದಿಂದ ಡಿಎಂಜಿ ಹಳ್ಳಿ ಮೂಲಕ ಬೀರಿಹುಂಡಿಗೆ ಬಸ್ ಸೌಲಭ್ಯ ಕಲ್ಪಿಸಲು ಬಂದಿರುವ ಮನವಿಯ ಬಗ್ಗೆ ಸಭೆಯಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ಗ್ರಾಮಗಳಿಗೆ ಅಗತ್ಯವಿರುವ ಬಸ್ ಬಿಡಬೇಕು ಎಂದು ಸೂಚಿಸಿದರು. ಕೆರೆಗೆ ಹೋಗುವ ರಸ್ತೆ ಅಭಿವೃದ್ದಿ,ಮಾದಹಳ್ಳಿ ಗ್ರಾಮದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಜಮೀನು ಮೀಸಲಿಡುವುದು, ದೇವಸ್ಥಾನದ ಹೆಸರಿನಲ್ಲಿರುವ ಜಮೀನನ್ನು ದೇವಸ್ಥಾನಕ್ಕೆ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ನುಗ್ಗಹಳ್ಳಿ ಗ್ರಾಮದಲ್ಲಿ ದುರಸ್ತಿ ಮಾಡುವುದಕ್ಕೆ ಗಮನಹರಿಸಲಾಗುವುದು. ದೊಡ್ಡಮಾರಗೌಡನಹಳ್ಳಿ ಗ್ರಾಮದ ಸರ್ವೆ ನಂಬರ್ 225ರಲ್ಲಿ 400 ಎಕರೆ ಜಮೀನು ಇದ್ದು, ದುರಸ್ತಿ ಮಾಡುವ ಬಗ್ಗೆ ಬಂದಿರುವ ಮನವಿಯನ್ನು ಪರಿಗಣಿಸಿಕ್ರಮಕೈಗೊಳ್ಳುವ ಭರವಸೆ ನೀಡಿದರು. ಬೊಮ್ಮೇನಹಳ್ಳಿ ಗ್ರಾಮದಲ್ಲಿ ಜಮೀನು ದುರಸ್ತಿಮಾಡುವ ಬಗ್ಗೆ ಪರಿಶೀಲಿಸುವ ಜತೆಗೆ,ಎಂಡಿಎ ಸ್ವಾಧೀನದಿಂದ ಕೈ ಬಿಡುವ ಬಗ್ಗೆ ಬಂದಿರುವ ಮನವಿ ಪರಿಶೀಲಿಸುತ್ತೇನೆ ಎಂದರು. ದೊಡ್ಡಮಾರಗೌಡನಹಳ್ಳಿ ಗ್ರಾಮದಲ್ಲಿ ಡಿ.2,3,4 ಮತ್ತು 6ರಂದು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ವಿಶೇಷ ಸೌಲಭ್ಯ ಒದಗಿಸಲಾಗುವುದು.ಜಾತ್ರೆಗೆ ಬರುವ ಜನರಿಗೆ ಅನುಕೂಲವಾಗಲೆಂದು ವಿಶೇಷ ಬಸ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಹೇಳಿದರು. ದೊಡ್ಡಮಾರಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ದುರಸ್ತಿಯನ್ನು ಮಾಡಿ ಅವರಿಗೆ ಎಲ್ಲಾ ದಾಖಲಾತಿಗಳನ್ನು ಒಂದು ಫೈಲ್ ಮೂಲಕ ರೈತರಿಗೆ ಜನವರಿ 26ರಂದು ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದರು.ತಹಶೀಲ್ದಾರ್ ಕೆ.ಎಂ.ಮಹೇಶ್ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಎಡಿಎಲ್ಆರ್ ಮಹೇಶ್, ಡಿಟಿಒ ಕಲಾಶ್ರೀ, ವಿವಿಧ ಇಲಾಖೆಯ ಅಧಿಕಾರಿಗಳಾದ ಜೀಸನ್, ವಿನಿತ್,ಸಂದೀಪ್ ಮತ್ತಿತರರು ಹಾಜರಿದ್ದರು.
ಸಂಬಂಧಿತ ಸುದ್ದಿಗಳು

ತುಳಸಿ ಗಿಡವು ಪವಿತ್ರತೆಯ ಸಂಕೇತ : ಸುರೇಶ್. ಎನ್ .ಋಗ್ವೇದಿ
ಚಾಮರಾಜನಗರ : ತುಳಸಿ ಗಿಡವು ಪವಿತ್ರತೆಯ ಸಂಕೇತ. ಭಾರತೀಯ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅಪಾರ ಗೌರವ, ಭಕ್ತಿ, ನಂಬಿಕೆ ಮತ್ತು ಮ…
◷ 22/11/2026
ಆರೋಗ್ಯ ಮಾಹಿತಿ ತಲುಪಿಸುವಲ್ಲಿ ಬಹುಭಾಷಾ ಎಐ (AI) ಮಹತ್ವದ ಪಾತ್ರ : ಭಾಷಿಣಿ ಸಿಇಒ ಅಮಿತಾಬ್ ನಾಗ್
ನವದೆಹಲಿ : ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನವನ್ನು ಸುಧಾರಿಸುವ ಮೂಲಕ, ವೈದ್ಯಕೀಯ ದಾಖಲೆಗಳನ್ನು ಸರಳಗೊಳಿಸುವ ಮೂಲಕ ಹಾಗೂ ಆರೋ…
◷ 22/11/2026
ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಗುರಿ: ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರ ಮೊದಲ ಅಧಿಕೃತ ಭಾರತ ಭೇಟಿ
ನವದೆಹಲಿ : ಮಾರ್ಚ್ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ತಮ್ಮ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿಗಾ…
◷ 22/11/2026
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ₹22,400 ಕೋಟಿ ನೆರವು ನೀಡುವಂತೆ ಮನವಿ : ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
ಬೆಂಗಳೂರು : ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು ರಾಜ್ಯದ ರೈತರ ಹಿತದೃಷ್ಟಿಯ…
◷ 22/11/2026
