ಮೈಸೂರು : ರಾಜ್ಯದಲ್ಲಿ ಆಡಳಿತದಲ್ಲಿರುವ  ಕಾಂಗ್ರೆಸ್‌ ಸರ್ಕಾರ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ರಾಜ್ಯದ ಜನರನ್ನು ವಂಚಿಸಿ  ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲು ಕನಸು ಕಾಣುತ್ತಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.ಅವರು ಇಂದು ಮೈಸೂರು ಜಿಲ್ಲಾ ಬಿಜೆಪಿ ಕಚೇರಿ ಸಚ್ಚಿನ್ ರಾಜೇಂದ್ರ ಭವನದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಿರುವ ಪ್ರತಿಭಟನೆಯ ಸಿದ್ಧತೆಯ ಹಿನ್ನೆಲೆಯಲ್ಲಿ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ವಿಭಾಗ ಮಟ್ಟದ ಸಭೆಯನ್ನು ಐದು ಜಿಲ್ಲಾ ಅಧ್ಯಕ್ಷರುಗಳ ಸಮ್ಮುಖದಲ್ಲಿ ಕರೆಯಲಾಗಿತ್ತು. ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರದ ವಿರುದ್ಧವಾಗಿ ಜನಾಂದೋಲನ ರೂಪಿಸಲಿಕ್ಕೆ ಜನರಿಗೆ ಕೊಟ್ಟ ಆಶ್ವಾಸನೆಗಳಿಂದ ಹಿಮ್ಮುಖವಾಗಿರುವ ಸುಳ್ಳಿನ ಸರದಾರ ಕಾಂಗ್ರೆಸ್‌ ಸರ್ಕಾರ ಜನರಿಗೆ ವಂಚನೆ, ಮೋಸಗಳನ್ನು ಮಾಡುತ್ತಾ ಹೆಚ್ಚು ಕಡಿಮೆ  ನಾಲ್ಕು ವರ್ಷ ಕಳೆದಿದೆ. ಇನ್ನೊಂದು ವರ್ಷ ಚುನಾವಣೆಗೆ ಬಾಕಿ ಇದ್ದು, ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ರಾಜ್ಯದ ಜನರನ್ನು ವಂಚಿಸಿ  ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲು ಕನಸು ಕಾಣುತ್ತಿದೆ. ಅವರ ಭ್ರಷ್ಟಾಚಾರದ ಹಲವು ವಿಚಾರಗಳನ್ನು ಈ ವಿಭಾಗದ ಜನರಿಗೆ ಮುಟ್ಟಿಸಿ, ಆ ಜನರನ್ನು ಎಬ್ಬಿಸಿ ಜನಾಂದೋಲನವೆಬ್ಬಿಸಿ ಮುಂದೆ ಈ ಸರ್ಕಾರ ಬರದಂತೆ ನೋಡಿಕೊಳ್ಳಬೇಕು. ಆ ಕಾರಣಕ್ಕೆ ಜನಾಂದೋಲನ ಮಾಡಲು ಹೊರಟಿದ್ದೇವೆ. ನ.23,24,25 ಬಿಜೆಪಿ ವತಿಯಿಂದ ಜನಾಮದೋಲನ ಹಮ್ಮಿಕೊಳ್ಳಲಾಗಿದೆ ಎಂದರು.ಹಲವಾರು ಆಶ್ವಾಸನೆಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ್ದರು. ಇದೀಗ ಏನೇ ಕೇಳಿದರೂ ದುಡ್ಡಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಗ ದುಡ್ಡಿಲ್ಲ ಮುಖ್ಯಮಂತ್ರಿ ಎಂದು ಟೀಕಿಸಿದರು. ಸಭೆಯಲ್ಲಿ  ಪಕ್ಷದ ಸಂಘಟನಾ ಬಲವರ್ಧನೆ, ಚುನಾವಣಾ ಸಿದ್ಧತೆ, ಪ್ರತಿಭಟನೆಯ ರೂಪುರೇಷೆಗಳು ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು.