ಮೈಸೂರು :  ಇಂದು ಮೈಸೂರಿನ ಸಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2026ರ ಉದ್ಘಾಟನೆಯನ್ನು   ಪ್ರಥಮ ಖೋ-ಖೋ ವಿಶ್ವಕಪ್ ವಿಜೇತೆ   ಚೈತ್ರ. ಬಿ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತರುಗಳಾದ ಡಾ. ಹರ್ಷಪ್ರಿಯಂವದ ,  ಸುಂದರ್ ರಾಜ್ ಕೆ.ಎಸ್., ‌  ಸಿದ್ದನಗೌಡ ಪಾಟೀಲ್ ,  ಮಾರುತಿ ಎ ಹಾಗೂ ಇಲಾಖೆಯ ಪ್ರಮುಖ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು