ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ ಶಾಸಕಿ ನಯನಾ ಮೋಟಮ್ಮ!

ಬೆಂಗಳೂರು: ಹಾಸನ ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರಿನ ಮೂಡಿಗೆರೆ ಭಾಗಗಳಿಗೆ ಕಳುಹಿಸಿದ್ದಕ್ಕೆ ಶಾಸಕಿ ನಯನಾ ಮೋಟಮ್ಮ ವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ವಿಚಾರಕ್ಕೆ ಅವರು ರಾಜೀನಾಮೆ ಪತ್ರವನ್ನು ಸ್ಪೀಕರ್ ಆಪ್ತ ಕಾರ್ಯದರ್ಶಿಗೆ ನೀಡಿ ತೆರಳಿದ್ದಾರೆ.ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸ್ಪೀಕರ್ ಇಲ್ಲದ ಕಾರಣ ಅವರ ಪಿಎಸ್ ಗೆ ರಾಜೀನಾಮೆ ಪತ್ರ ಕೊಟ್ಟಿದ್ದೇನೆ. ಅವರು ಸ್ಪೀಕರ್ ನಾಳೆ ಬರುತ್ತಾರೆ, ಆಗ ಕೊಡಿ ಎಂದರು. ನಮ್ಮ ಮಾತಿಗೆ ಬೆಲೆ ಇಲ್ಲ ಅಂದ್ರೆ ನಾವ್ಯಾಕೆ ಶಾಸಕರಾಗಿರಬೇಕು ಎಂದು ಅವರು ಬೇಸರ ಹೊರಹಾಕಿದ್ದಾರೆ. ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಭದ್ರ ಅಭಯಾರಣ್ಯಕ್ಕೆ ಆನೆಗಳನ್ನು ಓಡಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಆನೆ ಡ್ರೈವ್ ನಿಲ್ಲಿಸಬೇಕು. ಆನೆಗಳು ಎಲ್ಲಿಂದ ಬಂದವು ಅಲ್ಲಿಗೆ ಹೋಗುವ ಹಾಗೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಮ್ಮ ಅಭಿಪ್ರಾಯ ಕೇಳಿಲ್ಲ, ವಿಶ್ವಾಸಕ್ಕೆ ತಗೆದುಕೊಂಡಿಲ್ಲ. ನಾವು ವಿರೋಧ ಮಾಡುತ್ತೇವೆ ಎಂದು ನಮ್ಮ ಬಳಿ ಮಾತನಾಡಿಲ್ಲ. ನಾಳೆ ನಾನು ಸ್ಪೀಕರ್ ಅವರಿಗೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ಸಂಬಂಧಿತ ಸುದ್ದಿಗಳು

ಫೆಬ್ರವರಿಯಲ್ಲಿ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವ
ಕಾರ್ಕಳ : 2027ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಕಾರ್ಕಳದ ಐತಿಹಾಸಿಕ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವದ…
◷ 23/11/2026
ವಾಲ್ಮೀಕಿ ರಾಮಾಯಣ ಇಡೀ ವಿಶ್ವಕ್ಕೆ ಮಹಾಗ್ರಂಥ, ಅದರ ಪಾತ್ರಗಳು ಸದಾ ಆದರ್ಶದಾಯಕ : ಸಚಿವ ರಘುಮೂರ್ತಿ
ಮೈಸೂರಿನ ಬಸಾಪುರದಲ್ಲಿ ವಾಲ್ಮೀಕಿ, ಮದಕರಿನಾಯಕ ಪುತ್ಥಳಿ ಅನಾವರಣ
◷ 23/11/2026
ನೇಪಾಳದ ಪುನರ್ನಿರ್ಮಾಣಕ್ಕೆ ಭಾರತದ ಭರ್ಜರಿ ನೆರವು : 24,000 ಕೋಟಿ ನೇಪಾಳಿ ರೂಪಾಯಿ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ
ನವದೆಹಲಿ : 'ನೆರೆಹೊರೆಯವರಿಗೆ ಮೊದಲ ಆದ್ಯತೆ' (Neighbourhood First) ನೀತಿ ಮತ್ತು ಅಚಲ ಸ್ನೇಹಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿ, ನೇ…
◷ 23/11/2026
ಜಯಪುರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಜಾರಿಯಲ್ಲಿಲ್ಲ : ತಹಶೀಲ್ದಾರ್ ವರದಿಯಲ್ಲಿ ಬಹಿರಂಗ
ಮೈಸೂರು : ತಾಲೂಕಿನ ಜಯಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ, ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿ ಹಾಗೂ ಮಾತ…
◷ 23/11/2026
