2027 ಜನವರಿ 26ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ

ಮೈಸೂರು: ಮೈಸೂರು ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿದ್ದು, ಕಾಮಗಾರಿಯು ಈವರೆಗೆ ಮುಕ್ತಾಯಗೊಳ್ಳದೇ ಇವರು ಬಗ್ಗೆ ಆಯುಕ್ತರು, ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ಕಾಮಗಾರಿಯ ಮೇಲುಸ್ತುವಾರಿ ಸಮಾಲೋಚಕರು, ವಾಸ್ತುಶಿಲ್ಪ ಸಿಬ್ಬಂದಿ ಹಾಗೂ ದಲಿತ ಸಂಘಟನೆಗಳ ಮುಖಂಡರೊಂದಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಸಭೆ ಕರೆದು ಚರ್ಚಿಸಲಾಗಿದೆ.ಈ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು, ಕಾಮಗಾರಿಯ ಮೇಲುಸ್ತುವಾರಿ ಸಮಾಲೋಚಕರು ಹಾಗೂ ವಾಸ್ತು ಶಿಲ್ಪ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಇಲ್ಲದೇ ಇರುವ ಕಾರಣ ಕಾಮಗಾರಿಯು ನಿಗದಿತ ಅವಧಿಯಲ್ಲಿ ಪೂರ್ಣವಾಗದೇ ಇರುವುದು ತಿಳಿದುಬಂದಿರುತ್ತದೆ.ಆದ್ದರಿಂದ, ಗುತ್ತಿಗೆದಾರರು ಮತ್ತು ಕಾಮಗಾರಿಯ ಮೇಲುಸ್ತುವಾರಿ ಸಮಾಲೋಚಕರು ತಮ್ಮ ನಡುವಿನ ಗೊಂದಲ ಹಾಗೂ ಅಸಮಾಧಾನಗಳನ್ನು ನಿವಾರಿಸಿಕೊಳ್ಳುವಂತೆ ತಿಳಿಸುತ್ತಾ, ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಬಾಕಿ ಇರುವ ಕಾಮಗಾರಿಗಳ ಚೆಕ್‌ಲಿಸ್ಟ್ ಅನ್ನು ತಯಾರಿಸಿ, ಸದರಿ ಕಾಮಗಾರಿಗಳನ್ನು ಚೆಕ್‌ಲಿಸ್ಟ್ ಪಟ್ಟಿಯನ್ವಯ ನಿರ್ದಿಷ್ಟ ಸಮಯವನ್ನು ವರದಿ ಪಡಿಸಿ ನಿಗದಿತ ಅವಧಿಯೊಳಗೆ ಮುಗಿಸುವಂತೆ ಸೂಚಿಸಲಾಗಿದೆ.ವಾಸ್ತು ಶಿಲ್ಪ ಸಿಬ್ಬಂದಿಗಳು ಕಾಮಗಾರಿಗೆ ಅಗತ್ಯವಿರುವ ವಿನ್ಯಾಸ ನಕ್ಷೆಗಳನ್ನು ಸಿದ್ಧಪಡಿಸಿ, ಪ್ರಾಧಿಕಾರದಿಂದ ಅನುಮೋದನೆ ಪಡೆದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಾಗೂ ಕಾಮಗಾರಿಯ ಮೇಲುಸ್ತುವಾರಿ ಸಮಾಲೋಚಕರಿಗೆ ಸಕಾಲದಲ್ಲಿ ನೀಡುವಂತೆ ಹಾಗೂ ವಾಸ್ತು ಶಿಲ್ಪ ಸಿಬ್ಬಂದಿಗಳು ನೀಡುವ ನಕ್ಷೆಯನ್ವಯ ಹಾಗೂ ಯೋಜನೆಯ ಅಂದಾಜು ಪಟ್ಟಿಯಂತೆ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿ, 26-01-2027 ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
ಸಂಬಂಧಿತ ಸುದ್ದಿಗಳು

ಮಂಗಳೂರಿನಲ್ಲಿ ದೇಶದ ಮೊದಲ 'ಸಸ್ಟೈನಬಲ್ ಡೇಟಾ ಸೆಂಟರ್' ಸ್ಥಾಪನೆಗೆ ಸಿದ್ಧತೆ : ತಣ್ಣೀರುಬಾವಿ ಜಾಗ ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ದೇಶದ ಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ (Sustainable Data Center) ಸ್ಥಾಪಿಸಲು ರಾಜ್ಯ ಸರ್…
◷ 25/11/2026
ಸ್ವದೇಶಿ ಎಐ ಮಾಡೆಲ್ ‘ಚ್ಯಾರಿಯೆಟ್-1’ (Chariot-1) ಲೋಕಾರ್ಪಣೆ: 10 ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಣೆ
ನವದೆಹಲಿ : ಭಾರತದಲ್ಲಿ ಸ್ವದೇಶಿ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ಚ್ಯಾರಿಯೆಟ್-1’ (…
◷ 25/11/2026
ಟೋಕಿಯೊದ ನಗರಾಭಿವೃದ್ಧಿ ಮಾದರಿಯ ಅಧ್ಯಯನ: ರಾಜ್ಯದ ನಗರಗಳ ಭವಿಷ್ಯದ ಅಭಿವೃದ್ಧಿಗೆ ಹೊಸ ಚಿಂತನೆ!
ಟೋಕಿಯೋ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ನನ್ನನ್ನು ಒಳಗೊಂಡ ಕರ್ನಾಟಕದ ನಿಯೋಗವು ಟೋಕಿಯೊದ ಪ್ರಸಿದ್ಧ Toky…
◷ 25/11/2026
ಉರುಳಿಗೆ ಸಿಲುಕಿದ್ದ ಚಿರತೆ
ಶಿರಸಿ: ದುರುಳರು ಹಾಕಿದ್ದ ಉರುಳಿಗೆ ಸುಮಾರು ನಾಲೈದು ವರ್ಷ ವಯಸ್ಸಿನ ಚಿರತೆಯೊಂದು ಸಿಲುಕಿಕೊಂಡ ಘಟನೆ ಬನವಾಸಿ ಸಮೀಪದ ಬೆಂಗಳೆ-ಗುಡ್ಡ…
◷ 25/11/2026
