ನವದೆಹಲಿ : ಭಾರತದಲ್ಲಿ ಸ್ವದೇಶಿ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ಚ್ಯಾರಿಯೆಟ್-1’ (Chariot-1) ಫೌಂಡೇಶನ್ ಮಾಡೆಲ್ ಅನ್ನು ಬಿಡುಗಡೆ ಮಾಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ಬುಧವಾರ ಈ ಮಾಡೆಲ್‌ಗೆ ಚಾಲನೆ ನೀಡಿದರು.ಇದನ್ನು ‘Chariot Artificial Intelligence Pvt. Ltd.’ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ‘IndiaAI Mission’ ಅಡಿಯಲ್ಲಿ ಸ್ವದೇಶಿ ಫೌಂಡೇಶನ್ ಮಾಡೆಲ್ ರೂಪಿಸಲು ಆಯ್ಕೆಯಾದ ಆರಂಭಿಕ ನಾಲ್ಕು ತಂಡಗಳಲ್ಲಿ ಈ ಸಂಸ್ಥೆಯೂ ಒಂದಾಗಿದೆ.‘ಚ್ಯಾರಿಯೆಟ್-1’ ಅನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಮೊದಲಿನಿಂದಲೂ ಅಭಿವೃದ್ಧಿಪಡಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ಎಐ ಸಾಮರ್ಥ್ಯವನ್ನು ವೃದ್ಧಿಸುವುದು ಮತ್ತು ದೇಶದ ಭಾಷಾ ವೈವಿಧ್ಯತೆಗೆ ತಕ್ಕಂತೆ ತಂತ್ರಜ್ಞಾನವನ್ನು ರೂಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಮಾಡೆಲ್ ಇಂಗ್ಲಿಷ್ ಜೊತೆಗೆ 10 ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.