ಮೈಸೂರು :  ಮೈಸೂರಿನಲ್ಲೂ ಗಾಂಧಿ ಹತ್ಯೆ ಸತ್ಯ ನಾಟಕಕ್ಕೆ ತೊಡಕುಂಟಾಗಿದೆ. ಸಂವಿಧಾನ ದಿನ ಆಚರಣೆ ನೆಪವೊಡ್ಡಿ ಪೊಲೀಸರು ಭದ್ರತೆ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು.ಇಂದು ಬುಕ್ ಮಾಡಲಾಗಿದ್ದ ಕಲಾಮಂದಿರದ ಕಿರು ರಂಗಮದಿರ ವೇದಿಕೆ ಕ್ಯಾನ್ಸಲ್ ಆಗಿದೆ.ಪೊಲೀಸ್ ಭದ್ರತೆ ಇರದ ಕಾರಣ ವೇದಿಕೆ ಕೊಡದಿರಲು ಕಲಾಮಂದಿರ ಅಧಿಕಾರ ನಿರ್ಧರಿಸಿದೆ ಎನ್ನಲಾಗಿದೆ. ಪೊಲೀಸ್ ಭದ್ರತೆಯ ಪತ್ರ ತರುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರು ತಾಕೀತು ಮಾಡಿದ್ದು, ಸದ್ಯ ಕಲಾಮಂದಿರದ ಗೇಟ್‌ಗಳಿಗೆ  ಅಧಿಕಾರಿಗಳು ಬೀಗ ಹಾಕಿದ್ದಾರೆ.ಗೇಟ್ ಮುಂಭಾಗ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ   ಅವರು ನಾಟಕದ ಕಲಾವಿದರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ವರಿಕೆ ನೀಡಿದ್ದಾರೆ.