ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಸಂವಿಧಾನ ದಿನಾಚರಣೆ

ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಇಂದು ವಿಭಾಗೀಯ ಕಚೇರಿಯ ಮುಕ್ತ ಸಭಾಂಗಣದಲ್ಲಿ ಸಂವಿಧಾನ ದಿನವನ್ನು ಗೌರವಪೂರ್ಣ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭಾರತ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಿಸಿದರು. ಈ ಕಾರ್ಯಕ್ರಮವು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವದ ಮೌಲ್ಯಗಳು, ತತ್ವಗಳು ಹಾಗೂ ಆದರ್ಶಗಳನ್ನು ಎತ್ತಿಹಿಡಿಯುವ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಶಮ್ಮಾಸ್ ಹಮೀದ್ , ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳನ್ನು ಎತ್ತಿಹಿಡಿಯುವಲ್ಲಿ ಸಂವಿಧಾನದ ಪೀಠಿಕೆಯ ಮಹತ್ವವನ್ನು ವಿವರಿಸಿದರು. ಪ್ರತಿಯೊಬ್ಬ ರೈಲ್ವೆ ನೌಕರರು ತಮ್ಮ ದೈನಂದಿನ ಕರ್ತವ್ಯ ಮತ್ತು ನಡವಳಿಕೆಯ ಮೂಲಕ ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಎಲ್ಲಾ ನೌಕರರು ನಿಷ್ಠೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಏಕತೆಯ ಮನೋಭಾವದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಕರೆ ನೀಡಿದರು.
ಸಂಬಂಧಿತ ಸುದ್ದಿಗಳು

ದೆಹಲಿ ಮೃಗಾಲಯದಲ್ಲಿ ಜೀವವೈವಿಧ್ಯದ ಅನಾವರಣ
ನವದೆಹಲಿ : ಇಲ್ಲಿನ ರಾಷ್ಟ್ರೀಯ ಪ್ರಾಣಿ ಉದ್ಯಾನವನದಲ್ಲಿ (ದೆಹಲಿ ಮೃಗಾಲಯ) ಆಯೋಜಿಸಲಾಗಿದ್ದ 22ನೇ 'ಸಂಡೇ ಬರ್ಡ್ ವಾಕ್ @ ಎನ್ಝಡ್ಪ…
◷ 27/11/2026
ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ನವದೆಹಲಿ : ಕ್ಷೇತ್ರ ಪುನರ್ವಿಂಗಡಣೆಗೆ (Delimitation) ಸಂಬಂಧಿಸಿದ ಹೊಸ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾ…
◷ 27/11/2026
ಎಸ್ಐಟಿ ರಚನೆ ಮಾಡಿದ್ದೇ ಕ್ಲೀನ್ ಚಿಟ್ ಕೊಡಿಸಿಕೊಳ್ಳಲು ಎಂಬುದು ಸಾಬೀತಾಗಿದೆ :
ಬೆಂಗಳೂರು : ಕಾಂಗ್ರೆಸ್ ಪಕ್ಷವು ಇತಿಹಾಸವನ್ನು ಅಳಿಸುವ ಕೆಲಸ ಮಾಡುತ್ತಿದೆ. ಯಾವುದೇ ವಿಚಾರಣೆ (ಎನ್ಕ್ವೈರಿ) ಅಥವಾ ತನಿಖೆ ನಡೆಯದೆಯ…
◷ 27/11/2026
ವಾರದ ಅಂತ್ಯದ ವಹಿವಾಟಿನಲ್ಲಿ ಷೇರುಪೇಟೆಗೆ ಕುಸಿತದ ಬಿಸಿ ; ಸೆನ್ಸೆಕ್ಸ್ 989 ಅಂಕ ಕುಸಿತ, ನಿಫ್ಟಿ ಶೇ. 1ಕ್ಕಿಂತ ಹೆಚ್ಚು ಇಳಿಕೆ
ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ (ಕ್ರೂಡ್ ಆಯಿಲ್) ಬೆಲೆ ಏರಿಕೆಯಾಗಿದ್ದು, ಇದರ ನ…
◷ 27/11/2026
