ಕರ್ನಾಟಕದಲ್ಲಿ ಪಿಎಫ್ಐ, ಎಸ್ ಡಿ ಪಿಐ ಹಾವಳಿ ಹೆಚ್ಚಾಗಲು ಕೇರಳದ ಕಾಕಾಗಳೆ ಕಾರಣ : ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಕರ್ನಾಟಕದಲ್ಲಿ ಪಿಎಫ್ಐ, ಎಸ್ ಡಿ ಪಿಐ ಹಾವಳಿ ಹೆಚ್ಚಾಗಲು ಕೇರಳದ ಕಾಕಾಗಳೆ ಕಾರಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇರಳದ ಕಾಕಾ ಗಳು ಕರ್ನಾಟಕಕ್ಕೆ ಯಾಕೆ ಬರಬೇಕು. ತರಕಾರಿ ಖರೀದಿಗೆ ಬರುತ್ತಿದ್ದವರು ಈಗ ಜಮೀನು ಮಾಲೀಕರಾಗಿ ಕರ್ನಾಟಕದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಕೇರಳದ ಕಾಕಾ ಗಳಿಂದ ಈ ನಾಡಿನ ಸಂಸ್ಕೃತಿ ಕೆಡುತ್ತಿದೆ. ಮೈಸೂರು, ಬೆಂಗಳೂರಿನಲ್ಲಿ ಕೇರಳದ ಕಾಕಾಗಳ ಹಾವಳಿ ಹೆಚ್ಚು. ರಾಜ್ಯದಲ್ಲಿ ನಡೆದ ಹಿಂದೂ ಮುಖಂಡರ ಹತ್ಯೆಗಳ ಹಿಂದೆ ಇರೋದು ಯಾರು?ಹಿಂದೂ ಹೆಸರಿಟ್ಟು ಕೊಂಡ ಕೇರಳಿಗರ ಕಾಕಾಗಳು, ಕೇರಳದ ಕಾಕಾಗಳು ಹಿಂದೂಗಳ ಹೆಸರಿಟ್ಟು ಕೊಂಡು ವ್ಯಾಪಾರ ಮಾಡುತ್ತಿದ್ದಾರೆ.ಇಸ್ಮಾಯಿಲ್, ಮುಬಾರಕ್ ಅಂತ ಅವರ ನಿಜವಾದ ಹೆಸರು ಇಟ್ಟುಕೊಂಡು ವ್ಯಾಪಾರ ಮಾಡಲಿ. ಇವರನ್ನು ಹೀಗೆ ಬಿಟ್ಟರೆ ಎಲ್ಲಾ ಕಡೆಯೂ ಛೋಟಾ ಜಾರ್ಜ್, ಛೋಟಾ ಹ್ಯಾರೀಸ್ ಗಳು ಶಾಸಕರಾಗುತ್ತಾರೆ. ಕೇರಳದಲ್ಲಿನ ಹಿಂದೂಗಳು ಕೂಡ ಅಲ್ಲಿನ ಕಾಕಾರಿಂದ ಅಪಾಯದಲ್ಲಿದ್ದಾರೆ. ಕೇರಳದಲ್ಲಿನ ಹಿಂದೂಗಳು ಜಾತಿ ಹೆಸರಲ್ಲಿ ಛಿದ್ರವಾಗದೆ ಒಂದಾಗಬೇಕು. ಕೇರಳದ ಕಾಕಾಗಳಿಂದ ಕೊಡಗು ಅಪಾಯದಲ್ಲಿದೆ. ಕೇರಳದವರು ನಮ್ಮಲಿ ಯಾಕೆ ಓದಲು ಬರಬೇಕು. ನಮ್ಮಲಿ ಯಾಕೆ ಕೆಲಸಕ್ಕೆ ಬರಬೇಕು. ಕನ್ನಡಿಗರು ಕೇರಳಕ್ಕೆ ಪ್ರವಾಸಕ್ಕೆ, ದೇವಸ್ಥಾನಕ್ಕೆ ಹೋಗುತ್ತಾರೆ. ಕೆಲಸಕ್ಕಾಗಿ ನಾವೇನೂ ಅಲ್ಲಿಗೆ ಹೋಗಲ್ಲ. ಕೇರಳದವರು ಅಲ್ಲೆ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳು ಮಾಡಿಕೊಳ್ಳಲಿ. ನಮ್ಮಲಿಗೆ ಬರುವುದು ಬೇಡ. ಕೇರಳದ ಕಾಕಾಗಳಿಂದ ಇಡೀ ಕರ್ನಾಟಕಕ್ಕೆ ಕಂಟಕ ಬಂದಿದೆ. ಕರ್ನಾಟಕ ಎಲ್ಲರಿಗೂ ನಿರಾಶ್ರಿತರ ತಾಣವಾ ಎಂದು ವಾಗ್ದಾಳಿ ನಡೆಸಿದರು.ಸಂವಿಧಾನ ದಿನಾಚರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇಷ್ಟು ವರ್ಷ ಸಂವಿಧಾನ ದಿನಾಚರಣೆ ಮಾಡದ ಕಾಂಗ್ರೆಸ್ ಈಗ ಯಾಕೆ ಸಂವಿಧಾನ ದಿನ ಒಲವು ತೋರಿಸಲಿಲ್ಲ. ಮೋದಿ ಅವರು ಸಂವಿಧಾನ ಗೌರವ ಮಾಡಲು ಆರಂಭಿಸಿದರು. ಈಗ ಕಾಂಗ್ರೆಸ್ ಗೆ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಪ್ರೀತಿ ಬಂದಿದೆ. ದಲಿತರ ಕಲ್ಯಾಣದ ಹಣವನ್ನು ಸಿದ್ದರಾಮಯ್ಯ ಅವರು ಯಾಕೆ ಗ್ಯಾರಂಟಿ ಯೋಜನೆಗೆ ಹಾಕಿದರು. ಸಿದ್ದರಾಮಯ್ಯ ನಿಜವಾದ ದಲಿತರ ವಿರೋಧಿ. ಶ್ರೀನಿವಾಸಪ್ರಸಾದ ಅವರನ್ನು ತುಳಿದರು. ತಮ್ಮ ಮಗನ ಮೇಲೆ ಮಾತ್ರ ಕಿರೀಟ ಉಳಿಸಲು ಮಹದೇವಪ್ಪ ಅವರನ್ನು ತುಳಿದರು. ಕಾಂಗ್ರೆಸ್ ಗೆ ಅಂಬೇಡ್ಕರ್ ಮೇಲೆ ಪ್ರೀತಿ ಮತಗಳಿಸಲು ಮಾತ್ರ. ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ಅಂಬೇಡ್ಕರ್ ಬರೆದ ಸಂವಿಧಾನದ ಪೀಠಿಕೆನಾ ನಾವು ಓದುತ್ತಿರುವುದು. ಇಂದಿರಾಗಾಂಧಿ ತಿದ್ದುಪಡಿ ಮಾಡಿಸಿದ ಸಂವಿಧಾನ ಪಿಠೀಕೆ ಈಗ ಇರುವುದು. ಬರೆಸಿದ್ದು. ಅಂಬೇಡ್ಕರ್ ಬರೆದ ಸಂವಿಧಾನದ ಪೀಠಿಕೆ ಬದಲಾಯಿಸಿದ್ದು ಕಾಂಗ್ರೆಸ್. ಸಂವಿಧಾನವನ್ನು ಹಳ್ಳ ಹಿಡಿಸಲು ಯತ್ನಿಸಿದ್ದು ಕಾಂಗ್ರೆಸ್. ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ದಲಿತರಿಗೆ ಯಾಕೆ ಬಿಟ್ಟು ಕೊಡಲಿಲ್ಲ? ಮಾಯಾವತಿ ಅವರನ್ನು ಎರೆಡು ಬಾರಿ ಸಿಎಂ ಮಾಡಿದ್ದು ಬಿಜೆಪಿ ಎಂದರು.
ಸಂಬಂಧಿತ ಸುದ್ದಿಗಳು

ದೆಹಲಿ ಮೃಗಾಲಯದಲ್ಲಿ ಜೀವವೈವಿಧ್ಯದ ಅನಾವರಣ
ನವದೆಹಲಿ : ಇಲ್ಲಿನ ರಾಷ್ಟ್ರೀಯ ಪ್ರಾಣಿ ಉದ್ಯಾನವನದಲ್ಲಿ (ದೆಹಲಿ ಮೃಗಾಲಯ) ಆಯೋಜಿಸಲಾಗಿದ್ದ 22ನೇ 'ಸಂಡೇ ಬರ್ಡ್ ವಾಕ್ @ ಎನ್ಝಡ್ಪ…
◷ 27/11/2026
ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ನವದೆಹಲಿ : ಕ್ಷೇತ್ರ ಪುನರ್ವಿಂಗಡಣೆಗೆ (Delimitation) ಸಂಬಂಧಿಸಿದ ಹೊಸ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾ…
◷ 27/11/2026
ಎಸ್ಐಟಿ ರಚನೆ ಮಾಡಿದ್ದೇ ಕ್ಲೀನ್ ಚಿಟ್ ಕೊಡಿಸಿಕೊಳ್ಳಲು ಎಂಬುದು ಸಾಬೀತಾಗಿದೆ :
ಬೆಂಗಳೂರು : ಕಾಂಗ್ರೆಸ್ ಪಕ್ಷವು ಇತಿಹಾಸವನ್ನು ಅಳಿಸುವ ಕೆಲಸ ಮಾಡುತ್ತಿದೆ. ಯಾವುದೇ ವಿಚಾರಣೆ (ಎನ್ಕ್ವೈರಿ) ಅಥವಾ ತನಿಖೆ ನಡೆಯದೆಯ…
◷ 27/11/2026
ವಾರದ ಅಂತ್ಯದ ವಹಿವಾಟಿನಲ್ಲಿ ಷೇರುಪೇಟೆಗೆ ಕುಸಿತದ ಬಿಸಿ ; ಸೆನ್ಸೆಕ್ಸ್ 989 ಅಂಕ ಕುಸಿತ, ನಿಫ್ಟಿ ಶೇ. 1ಕ್ಕಿಂತ ಹೆಚ್ಚು ಇಳಿಕೆ
ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ (ಕ್ರೂಡ್ ಆಯಿಲ್) ಬೆಲೆ ಏರಿಕೆಯಾಗಿದ್ದು, ಇದರ ನ…
◷ 27/11/2026
