ಮೈಸೂರು :  ಕುವೆಂಪು ನಗರ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನಾಗರಿಕ ವೇದಿಕೆಯ ಪೂರ್ಣಪ್ರಜ್ಞ ವಿದ್ಯಾ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಆಚರಿಸಲಾಯಿತು.   ಫ್ರೀ ಕೆ ಜಿ  ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ವೇದಿಕೆಯ ಗೌರವ ಅಧ್ಯಕ್ಷ   ಬಿ ಪಿ ಪುಟ್ಟಸ್ವಾಮಿ, ಅಧ್ಯಕ್ಷ  ಕೆ ಆರ್ ಶ್ರೀರಂಗಯ್ಯ, ಕಾರ್ಯದರ್ಶಿ ಬಿ ಶ್ರೀಕಾಂತ್, ಖಜಾಂಚಿ ಎಸ್ ಪಿ ತ್ಯಾಗರಾಜು, ಶಾಲಾ ಸಮಿತಿಯ ಅಧ್ಯಕ್ಷ  ಜೆ ಲೋಕೇಶ್, ಸದಸ್ಯರುಗಳಾದ ಶೈಲೇಂದ್ರ, ಮುರಾರಿ, ರಮೇಶ್, ಅಪ್ಪಾಜಿ ಗೌಡ, ವಿಜಯ ಅಪ್ಪಾಜಿಗೌಡ,ಮುಖ್ಯ ಶಿಕ್ಷಕಿ ಶಾಮಲಾದೇವಿ, ಹಾಗೂ ಶಿಕ್ಷಕರುಗಳು ಉಪಸ್ಥಿತರಿದ್ದರು. ಮಕ್ಕಳಿಗೆ ಸಿಹಿ ವಿತರಿಸಲಾಯಿತು