ಬೆಂಗಳೂರು :  ಆಧ್ಯಾತ್ಮದ ನೆಲೆ, ಶಾಂತಿ ಮತ್ತು ಸೇವೆಯ ಸಂದೇಶ ಸಾರುವ ಬೆಂಗಳೂರಿನ ಜ್ಞಾನಭಾರತಿಯ ಮಾತಾ ಅಮೃತಾನಂದಮಯಿ ಮಠದಲ್ಲಿ ಇಂದು ಆಯೋಜಿಸಿದ್ದ ಬ್ರಹ್ಮಸ್ಥಾನ ವಾರ್ಷಿಕ ಮಹೋತ್ಸವ-2026ರಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾತಾ ಅಮೃತಾನಂದಮಯಿ ಅವರ ದಿವ್ಯ ಆಶೀರ್ವಾದ ಪಡೆದರು.ಮಠದಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂಭ್ರಮಕ್ಕೆ ಮೆರುಗು ನೀಡಿದ್ದು, ಧಾರ್ಮಿಕ ಶ್ರದ್ಧೆ ಹಾಗೂ ಸಾಂಸ್ಕೃತಿಕ ವೈಭವದ ಸುಂದರ ಸಂಗಮಕ್ಕೆ ಸಾಕ್ಷಿಯಾದೆ ಎಂದು ಸಿಎಂ ತಿಳಿಸಿದರು. ಈ ವೇಳೆ ಶಾಸಕ  ಎಸ್‌.ಟಿ. ಸೋಮಶೇಖರ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.