500 ಕೋಟಿ ರೂ. ಗಡಿ ದಾಟಿ ಹೊಸ ದಾಖಲೆ ಬರೆದ ‘ರಾಮಾಯಣ: ಭಾಗ-1’

ಮುಂಬೈ : ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ-1’ ಚಿತ್ರವು ಬಾಕ್ಸ್ ಆಫೀಸ್ ನ್ನು ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ಆರಂಭದಲ್ಲಿ ಅದರಲ್ಲೂ ವಿಶೇಷವಾಗಿ ವಿದೇಶಿ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದ ಓಪನಿಂಗ್ ಕಾಣದೆ ತುಸು ನೀರಸ ಆರಂಭ ಪಡೆದುಕೊಂಡಿದ್ದರೂ, ವಾರಾಂತ್ಯದಲ್ಲಿ ಚೇತರಿಕೆ ಕಂಡಿದೆ. ಭಾನುವಾರದ ವೇಳೆಗೆ ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಗಳಿಕೆ ದಾಖಲಿಸಿದ್ದು, ಕೇವಲ ನಾಲ್ಕು ದಿನಗಳಲ್ಲೇ ವಿಶ್ವಾದ್ಯಂತ 500 ಕೋಟಿ ರೂ. ಗಡಿ ದಾಟಿ ಹೊಸ ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ನ.5 ರಂದು ವಿಶ್ವಾದ್ಯಂತ ತೆರೆಕಂಡಿತು. ಶುಕ್ರವಾರದ ಗಳಿಕೆಯಲ್ಲಿ ತುಸು ಕಡಿಮೆ ಆಗಿತ್ತು. ಆದರೆ ಶನಿವಾರ ಮತ್ತು ಭಾನುವಾರದಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಹಾಪೂರವೇ ಹರಿದುಬಂದ ಪರಿಣಾಮ, ಭಾರತದಲ್ಲಿ ನಾಲ್ಕು ದಿನಗಳಲ್ಲಿ ಭಾರತದಲ್ಲಿ 285 ಕೋಟಿ ಗಳಿಕೆ ದಾಖಲಾಯಿತು. ವಿದೇಶಿ ಮಾರುಕಟ್ಟೆಗಳಲ್ಲಿ 222 ಕೋಟಿಗೂ ಅಧಿಕ ಕಲೆಕ್ಷನ್ ಬಾಚಿಕೊಂಡಿದೆ. ಇದರೊಂದಿಗೆ ಚಿತ್ರದ ಜಾಗತಿಕ ಒಟ್ಟು ಗಳಿಕೆ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 507 ಕೋಟಿ ತಲುಪಿದೆ
ಸಂಬಂಧಿತ ಸುದ್ದಿಗಳು

1000 ಕೋಟಿಯತ್ತ ದಾಪುಗಾಲಿಟ್ಟ `ರಾಮಾಯಣ ಭಾಗ1’
ಮುಂಬೈ : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ನಿತೇಶ್ ತಿವಾರಿ ನಿರ್ದೇಶನದ `ರಾಮಾಯಣ’ ಬಾಕ್ಸ್ ಆಫೀಸ್ ಭರ್ಜರಿ…
◷ 12/11/2026
13 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿದ ಪವನ್ ಕಲ್ಯಾಣ್!
ಹೈದ್ರಾಬಾದ್ : ಖ್ಯಾತ ಚಲನಚಿತ್ರ ನಟ, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಕೊನಿಡೇ…
◷ 10/11/2026
ಶಂಕರ್ ನಾಗ್ ಸದಾ ಕಾಲ ಕನ್ನಡಿಗರ ಹೃದಯದಲ್ಲಿ ನೆಲೆಸಿರುತ್ತಾರೆ : ಸುರೇಶ್. ಎನ್. ಋಗ್ವೇದಿ
ಚಾಮರಾಜನಗರ : ಕನ್ನಡ ಚಲನಚಿತ್ರ ರಂಗದ ಶ್ರೇಷ್ಠ ನಟರಾಗಿ, ನಿರ್ದೇಶಕರಾಗಿ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ತಮ್ಮದೇ ಚಾಪನ್ನು ಮೂಡ…
◷ 09/11/2026
ಷರತ್ತುಗಳನ್ನು ಅನ್ವಯಿಸಿ ನಟ ದರ್ಶನ್ ಬೇಡಿಕೆಗೆ ಕೋರ್ಟ್ ಅಸ್ತು
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 15 ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲ…
◷ 07/11/2026
