ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ: 5 ಹೆಲ್ತ್ ಪ್ರಾಡಕ್ಟ್ ಕಂಪನಿಗಳ ಪರವಾನಗಿ ತಕ್ಷಣದಿಂದಲೇ ಅಮಾನತು

ನವದೆಹಲಿ : ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ನಿಯಂತ್ರಕ ಮಾನದಂಡಗಳನ್ನು ಗಂಭೀರವಾಗಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಐದು ನ್ಯೂಟ್ರಾಸ್ಯುಟಿಕಲ್ (ಪೌಷ್ಠಿಕಾಂಶಯುಕ್ತ ಪೂರಕ ಆಹಾರ) ಮತ್ತು ಹೆಲ್ತ್ ಪ್ರಾಡಕ್ಟ್ ತಯಾರಿಕಾ ಕಂಪನಿಗಳ ಪರವಾನಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.ವೇದಾಂತ ರೆಮಿಡೀಸ್ (Vedant Remedies), ಲ್ಯೂಸಿಡ್ ಹೆಲ್ತ್ಕೇರ್ (Lucid Healthcare), ಅಂಬಿಕೊ ಆಯುರ್ವೇದಿಕ್ ಹೆಲ್ತ್ಕೇರ್ (Ambico Ayurvedic Healthcare), ವಿಟಾಮೆಡಿಕ್ ಹೆಲ್ತ್ ನ್ಯೂಟ್ರಾಸ್ಯುಟಿಕಲ್ಸ್ (Vitamedic Health Nutraceuticals) ಮತ್ತು ಅಡೋರಿಯಲ್ ಹೆಲ್ತ್ಕೇರ್ (Adorial Healthcare) ಪ್ರಾಧಿಕಾರದ ಕ್ರಮಕ್ಕೆ ಒಳಗಾಗಿರುವ ಕಂಪನಿಗಳಾಗಿವೆ.ತನಿಖೆಯ ವರದಿಗಳು ನಿಯಮಗಳ ಗಂಭೀರ ಉಲ್ಲಂಘನೆ ಮತ್ತು ಪರವಾನಗಿ ದಾಖಲೆಗಳಲ್ಲಿ ದಾರಿತಪ್ಪಿಸುವ ಮಾಹಿತಿ ನೀಡಿರುವುದನ್ನು ಸೂಚಿಸುತ್ತವೆ. ಗ್ರಾಹಕರ ಸುರಕ್ಷತೆ ಮತ್ತು ವೇಗವಾಗಿ ಬೆಳೆಯುತ್ತಿರುವ ನ್ಯೂಟ್ರಾಸ್ಯುಟಿಕಲ್ ಹಾಗೂ ಹೆಲ್ತ್ ಸಪ್ಲಿಮೆಂಟ್ ಮಾರುಕಟ್ಟೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು FSSAI ಸ್ಪಷ್ಟಪಡಿಸಿದೆ.
ಸಂಬಂಧಿತ ಸುದ್ದಿಗಳು

9 ತಿಂಗಳಲ್ಲಿ 1 ಕೋಟಿಗೂ ಹೆಚ್ಚು ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ರಕ್ಷಣಾ ಕವಚ : ಪ್ರಧಾನಿ ಮೋದಿ ಶ್ಲಾಘನೆ
ನವದೆಹಲಿ : ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಭಾರತವು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 2026ರ ಫೆಬ್ರವರಿಯಲ್ಲಿ …
◷ 23/11/2026
ಆರೋಗ್ಯ ಮಾಹಿತಿ ತಲುಪಿಸುವಲ್ಲಿ ಬಹುಭಾಷಾ ಎಐ (AI) ಮಹತ್ವದ ಪಾತ್ರ : ಭಾಷಿಣಿ ಸಿಇಒ ಅಮಿತಾಬ್ ನಾಗ್
ನವದೆಹಲಿ : ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನವನ್ನು ಸುಧಾರಿಸುವ ಮೂಲಕ, ವೈದ್ಯಕೀಯ ದಾಖಲೆಗಳನ್ನು ಸರಳಗೊಳಿಸುವ ಮೂಲಕ ಹಾಗೂ ಆರೋ…
◷ 22/11/2026
ಐಸಿಎಂಆರ್-ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ
ನವದೆಹಲಿ : ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)-ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆಯ ವರ್ಷಪೂರ್ತಿ ನಡೆಯುವ ಸುವರ್ಣ …
◷ 17/11/2026
ಕ್ಯಾನ್ಸರ್ ಔಷಧಿಗಳ ಬೆಲೆ ಭಾರೀ ಇಳಿಕೆ
ನವದೆಹಲಿ : ಕೇಂದ್ರ ಸರ್ಕಾರವು ಕ್ಯಾನ್ಸರ್ ನಿರೋಧಕ 1,364 ಔಷಧಿ ಫಾರ್ಮುಲೇಶನ್ಗಳ ಪರಿಷ್ಕೃತ ಬೆಲೆಗಳನ್ನು ಜಾರಿಗೆ ತಂದಿದ್ದು, ಸುಮಾ…
◷ 09/11/2026
