ನವದೆಹಲಿ : ಗೋವರ್ಧನ ಪೂಜೆಯ ಪವಿತ್ರ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೋವುಗಳು ಮತ್ತು ಕರುಗಳೊಂದಿಗೆ ಇರುವ ತಮ್ಮ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದೇಶವಾಸಿಗಳಿಗೆ ಹಾರ್ದಿಕ ಶುಭಾಶಯ ಕೋರಿದ್ದಾರೆ.ಇನ್ಸ್‌ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, "ಗೋವರ್ಧನ ಪೂಜೆಯ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದ ಸಿಗಲಿ" ಎಂದು ಬರೆದುಕೊಂಡಿದ್ದಾರೆ.ಗೋವುಗಳಿಗೆ ಸ್ವಹಸ್ತದಿಂದ ಹುಲ್ಲು ತಿನ್ನಿಸಿದ ಪ್ರಧಾನಿ-ಪ್ರಧಾನಿಯವರು ಹಂಚಿಕೊಂಡಿರುವ ಮೂರು ಫೋಟೋಗಳಲ್ಲಿ, ಅವರು ಗೋವುಗಳು ಮತ್ತು ಕರುಗಳನ್ನು ಪ್ರೀತಿಯಿಂದ ಮೈದಡವಿ, ತಾವೇ ಖುದ್ದು ಹಸಿರು ಹುಲ್ಲನ್ನು ತಿನ್ನಿಸುತ್ತಿರುವುದು ಕಂಡುಬಂದಿದೆ. ಈ ಚಿತ್ರಗಳು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗೋಸೇವೆ ಮತ್ತು ಗೋವಿನ ಮೇಲಿರುವ ಗೌರವದ ಪರಂಪರೆಯನ್ನು ಎತ್ತಿಹಿಡಿಯುತ್ತವೆ.ಗೋವರ್ಧನ ಪೂಜೆಯ ಮಹತ್ವ-ದೀಪಾವಳಿಯ ಮರುದಿನ ಅರ್ಥಾತ್ ಕಾರ್ತಿಕ ಶುಕ್ಲ ಪ್ರತಿಪದೆಯಂದು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಈ ಹಬ್ಬವು ಪ್ರಕೃತಿ ಪೂಜೆಯ ಸಂಕೇತವಾಗಿದ್ದು, ಆಹಾರ, ನೀರು, ಫಲವತ್ತಾದ ಭೂಮಿ ಮತ್ತು ಕಾಡುಗಳು ನಮ್ಮ ಜೀವನದ ಜೀವನಾಡಿ ಎಂಬುದನ್ನು ನೆನಪಿಸುತ್ತದೆ.ಪೌರಾಣಿಕ ಕಥೆಯ ಪ್ರಕಾರ, ಭಗವಾನ್ ಶ್ರೀಕೃಷ್ಣನು ಪ್ರಚಂಡ ಮಳೆಯಿಂದ ಬ್ರಜವಾಸಿಗಳನ್ನು ರಕ್ಷಿಸಲು ಗೋವರ್ಧನ ಪರ್ವತವನ್ನು ತನ್ನ ಕಿರುಬೆರಳಿನಲ್ಲಿ ಎತ್ತಿ ಹಿಡಿದಿದ್ದನು. ಈ ಘಟನೆಯಿಂದಲೇ ಗೋವರ್ಧನ ಪೂಜೆ ಪ್ರಾರಂಭವಾಯಿತು. ಸಂಕಷ್ಟದ ಸಮಯದಲ್ಲಿ ಭಗವಂತ ತನ್ನ ಭಕ್ತರನ್ನು ರಕ್ಷಿಸುತ್ತಾನೆ ಎಂಬ ಸಂದೇಶವನ್ನು ಈ ಪೂಜೆ ನೀಡುತ್ತದೆ.