ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5,000 ರೂಪಾಯಿ ಬರ ಪರಿಹಾರ ಸಿಗುವುದನ್ನು ಸರ್ಕಾರ ಖಚಿತಪಡಿಸಲಿದೆ : ಮಾಧ್ಯಮ ಪ್ರಕಟಣೆ ಮೂಲಕ ಡಾ. ಜಿ. ಪರಮೇಶ್ವರ್ ತಿರುಗೇಟು

ಬೆಂಗಳೂರು : ಬರ ಪರಿಹಾರ ವಿತರಣೆ ವಿಚಾರವಾಗಿ ವಿಪಕ್ಷಗಳು ಮಾಡುತ್ತಿರುವ ಸರಣಿ ಆರೋಪಗಳ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಮೊದಲ ಕಂತಿನಲ್ಲಿ ನೀಡಲಾದ ಹಣವೇ ಅಂತಿಮ ಪರಿಹಾರವಲ್ಲ. ರಾಜ್ಯದ ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5,000 ರೂಪಾಯಿ ಬರ ಪರಿಹಾರ ಸಿಗುವುದನ್ನು ಸರ್ಕಾರ ಖಚಿತಪಡಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.ಪ್ರತಿಪಕ್ಷಗಳ ವದಂತಿಗಳಿಗೆ ತೆರೆ ಎಳೆದಿರುವ ಅವರು ಪರಿಹಾರದ ಮೊತ್ತದ ಲೆಕ್ಕಾಚಾರವನ್ನು ಸ್ಪಷ್ಟಪಡಿಸಿದ್ದಾರೆ. ಶೀಘ್ರವೇ ಹೆಚ್ಚುವರಿಯಾಗಿ ಮತ್ತೊಂದು 3,000 ರೂ. ಪಾವತಿಯಾಗಲಿದೆ. ಮೊದಲ ಕಂತಿನಲ್ಲಿ ಹೆಚ್ಚುವರಿಯಾಗಿ ಬಾಕಿ ಉಳಿದ ₹2,500 ಹಣ ಬಿಡುಗಡೆಯಾಗಲಿದೆ. ಕೇವಲ ಅರ್ಧ ಎಕರೆ ಜಮೀನು ಹೊಂದಿರುವ ಅತ್ಯಂತ ಸಣ್ಣ ಹಿಡುವಳಿದಾರ ರೈತನಿಗೂ ಕನಿಷ್ಠ 5 ಸಾವಿರ ರೂಪಾಯಿ ಪರಿಹಾರ ಖಚಿತವಾಗಿ ದೊರೆಯಲಿದೆ. ರೈತನ ಜಮೀನಿನ ವಿಸ್ತೀರ್ಣದ ಆಧಾರದಲ್ಲಿ ಮಾತ್ರವೇ ಪರಿಹಾರ ನಿರ್ಧಾರವಾಗಬಾರದು” ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ. ಬೆಳೆ ನಷ್ಟದ ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ಪ್ರತಿಯೊಬ್ಬ ರೈತನಿಗೆ 5,000 ರಿಂದ ಗರಿಷ್ಠ 60,000 ವರೆಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ.ಕೇಂದ್ರ ಸರ್ಕಾರದ SDRF ಮತ್ತು NDRF ಮಾರ್ಗಸೂಚಿಗಳನ್ನು ಮೀರಿಯೂ ರಾಜ್ಯ ಸರ್ಕಾರ ತನ್ನ ಸ್ವಂತ ನಿಧಿಯಿಂದ ರೈತರಿಗೆ ಹೆಚ್ಚುವರಿ ಪರಿಹಾರ ನೀಡಲು ತೀರ್ಮಾನಿಸಿದೆ. ಅರ್ಹ ರೈತರಿಗೆ ಪರಿಹಾರ ತಲುಪುವಲ್ಲಿ ಯಾವುದೇ ಲೋಪವಾಗಬಾರದು. ಬಾಕಿ ಇರುವ ಕಂತುಗಳ ಹಣವನ್ನು ತಕ್ಷಣವೇ ತ್ವರಿತವಾಗಿ ಖಾತೆಗಳಿಗೆ ಜಮಾ ಮಾಡಲು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.ರೈತರ ಸಂಕಷ್ಟ ಮತ್ತು ಕಣ್ಣೀರನ್ನು ಪ್ರತಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ಸಾರ್ವಜನಿಕರು ಹಾಗೂ ರೈತರು ಯಾವುದೇ ತಪ್ಪು ಮಾಹಿತಿ ಅಥವಾ ವದಂತಿಗಳಿಗೆ ಕಿವಿಗೊಡಬಾರದು. ಪರಿಹಾರ ವಿತರಣೆಯಲ್ಲಿ ಏನೇ ಸಣ್ಣಪುಟ್ಟ ಲೋಪಗಳಿದ್ದರೆ ತಕ್ಷಣವೇ ಸರಿಪಡಿಸಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.
ಸಂಬಂಧಿತ ಸುದ್ದಿಗಳು

ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಕುಸಿತ !
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ್ದ ಉದ್ವಿಗ್ನತೆ ಶಮನಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ…
◷ 10/11/2026
ಮಂಡ್ಯದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಜೆಡಿಎಸ್ ಅಡ್ಡಿ: ಶಾಸಕ ಗಣಿಗ ರವಿ ಆರೋಪ
ಹಾಸನಾಂಬ ದೇವಿ ದರ್ಶನ ಪಡೆದ ಶಾಸಕ
◷ 10/11/2026
ಅನ್ನದಾತರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ : ಬಿ.ವೈ.ವಿಜಯೇಂದ್ರ ಕಿಡಿ
ಬೆಂಗಳೂರು : ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರಿಗೆ ಸಾಂತ್ವನ ಹೇಳಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ, ಕಿಂಚಿತ್ ಮಾನವೀಯತೆಯೂ ಇಲ…
◷ 10/11/2026
ಹಾಸನಾಂಬೆಯ ದರ್ಶನಕ್ಕೆ ಮುಂಜಾನೆ 4ರವರೆಗೆ ಅವಕಾಶ
ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ…
◷ 10/11/2026
