ಮಾದಪ್ಪನ ಮಹಾ ರಥೋತ್ಸವ ವಿಜೃಂಭಣೆಯಿಂದ ಸಂಪನ್ನ

ಚಾಮರಾಜನಗರ
:
ಮಲೆಮಹದೇಶ್ವರಬೆಟ್ಟದಲ್ಲಿ
ಮಾದಪ್ಪನ ಮಹಾ ರಥೋತ್ಸವ
ವಿಜೃಂಭಣೆಯಿಂದ ನಡೆಯಿತು.
ಪವಾಡ
ಪುರುಷ ಮಾದಪ್ಪನ ದೀಪಾವಳಿ ಮಹಾರಥೋತ್ಸವ
ಸಂಪನ್ನಗೊಂಡಿದೆ. ಬೆಳಗ್ಗೆ
7.30ರಿಂದ 8.40 ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಮಹಾರಥೋತ್ಸವ ಜರುಗಿತು. ಮಹಾ ರಥೋತ್ಸವಕ್ಕೆ ಸಾಲೂರು ಮಠದ ಶ್ರೀಗಳು ಚಾಲನೆ ನೀಡಿದರು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಾದಪ್ಪನ ಮಹಾ ರಥೋತ್ಸವ
ಜರುಗಿತು. ಮಾದಪ್ಪನ ದೀಪಾವಳಿ
ಮಹಾ ರಥೋತ್ಸವವನ್ನು ಮಾದಪ್ಪನ ಲಕ್ಷಾಂತರ ಭಕ್ತರು
ಕಣ್ತುಂಬಿಕೊಂಡರು. ಮಹಾ ರಥಕ್ಕೆ
ಹಣ್ಣು, ದವನ ಎಸೆದು ಹರಕೆ ತೀರಿಸಿದರು. ಉಘೇ ಉಘೇ
ಮಾದಪ್ಪ ಎನ್ನುವ ಝೇಂಕಾರದೊಂದಿಗೆ ಮಹಾ ರಥೋತ್ಸವ ಜರುಗಿತು. ಉಘೇ,ಉಘೇ ಮಾದಪ್ಪ ಎನ್ನುವ ಘೋಷಣೆ ಮೊಳಗಿಸಿ ಭಕ್ತರು ಮಾಯಕಾರನ ಭಕ್ತಿರಸದಲ್ಲಿ ಮಿಂದೆದ್ದರು. ಹಸಿರು ಸೀರೆಯನ್ನುಟ್ಟು ಹಾಲರವಿ ಹೊತ್ತಿದ್ದ ಬೇಡಗಂಪಣ್ಣ ಸಮುದಾಯದ 101 ಹೆಣ್ಣುಮಕ್ಕಳ ಮೆರವಣಿಗೆ ಸಾಗಿಬಂತು. ಹುಲಿ ವಾಹನ, ಬಸವ ವಾಹನ ರುದ್ರಾಕ್ಷಿ ವಾಹನಗಳು, ಜಾನಪದ ಕಲಾತಂಡಗಳೊಂ ದಿಗೆ ಮಹಾ ರಥೋತ್ಸವ ಸಾಗಿತು. ಮಾದಪ್ಪನ ದರ್ಶನಕ್ಕಾಗಿ ಮಹದೇಶ್ವರಬೆಟ್ಟಕ್ಕೆ ರಾಜ್ಯ, ನೆರೆ ರಾಜ್ಯದ ಭಕ್ತರು ಆಗಮಿಸಿದ್ದರು. ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಹಾಗೂ ನೆರೆಯ ತಮಿಳುನಾಡಿನಿಂದಲೂಭಕ್ತರು ಆಗಮಿಸಿದ್ದರು.
ಬೆಟ್ಟದ ತುಂಬೆಲ್ಲಾ
ಉಘೇ ಉಘೇ ಮಾದಪ್ಪ, ಉಘೇ ಮಾಯ್ಕಾರ ಝೇಂಕರಿಸಿತ್ತು. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಮಹಾ ರಥೋತ್ಸವ ನಡೆಯಿತು. ಭಕ್ತರಿಗೆ ಪ್ರಸಾದಕ್ಕಾಗಿ ಪ್ರಾಧಿಕಾರದಿಂದ 2 ಲಕ್ಷಕ್ಕೂ ಹೆಚ್ಚು ಲಾಡು ತಯಾರಿಸಲಾಗಿತ್ತು. ವಿವಿಧೆಡೆಯಿಂದ
ಬರುವ ಲಕ್ಷಾಂತರ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಸಂಬಂಧಿತ ಸುದ್ದಿಗಳು

ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5,000 ರೂಪಾಯಿ ಬರ ಪರಿಹಾರ ಸಿಗುವುದನ್ನು ಸರ್ಕಾರ ಖಚಿತಪಡಿಸಲಿದೆ : ಮಾಧ್ಯಮ ಪ್ರಕಟಣೆ ಮೂಲಕ ಡಾ. ಜಿ. ಪರಮೇಶ್ವರ್ ತಿರುಗೇಟು
ಬೆಂಗಳೂರು : ಬರ ಪರಿಹಾರ ವಿತರಣೆ ವಿಚಾರವಾಗಿ ವಿಪಕ್ಷಗಳು ಮಾಡುತ್ತಿರುವ ಸರಣಿ ಆರೋಪಗಳ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್…
◷ 10/11/2026
ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಕುಸಿತ !
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ್ದ ಉದ್ವಿಗ್ನತೆ ಶಮನಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ…
◷ 10/11/2026
ಮಂಡ್ಯದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಜೆಡಿಎಸ್ ಅಡ್ಡಿ: ಶಾಸಕ ಗಣಿಗ ರವಿ ಆರೋಪ
ಹಾಸನಾಂಬ ದೇವಿ ದರ್ಶನ ಪಡೆದ ಶಾಸಕ
◷ 10/11/2026
ಅನ್ನದಾತರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ : ಬಿ.ವೈ.ವಿಜಯೇಂದ್ರ ಕಿಡಿ
ಬೆಂಗಳೂರು : ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರಿಗೆ ಸಾಂತ್ವನ ಹೇಳಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ, ಕಿಂಚಿತ್ ಮಾನವೀಯತೆಯೂ ಇಲ…
◷ 10/11/2026
