ಹಾಸನಾಂಬೆಯ ದರ್ಶನಕ್ಕೆ ಮುಂಜಾನೆ 4ರವರೆಗೆ ಅವಕಾಶ

ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈಗಾಗಲೇ ಕೇವಲ 12 ದಿನದಲ್ಲಿ 30 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ನಾಳೆ ಮುಂಜಾನೆ 4 ಗಂಟೆವರೆಗೂ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು ‘ಇಂದು ರಾತ್ರಿ 8 ಗಂಟೆಯಿಂದ 10 ಗಂಟೆವರೆಗೂ ನೈವೇದ್ಯ ಸಮಯ ಇರಲಿದೆ. ಆನಂತರ ನಾಳೆ (ಬುಧವಾರ) ಮುಂಜಾನೆ 4 ಗಂಟೆವರೆಗೂ ದರ್ಶನ ಪಡೆಯಬಹುದು. ಹಾಸನ ಸುತ್ತಮುತ್ತಲಿನ ಹಳ್ಳಿಗಳ ಜನರ ಮನವಿ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ’ ಎಂದು ಅವರು ಹೇಳಿದರು.ಇಂದು ಹಬ್ಬ ಮುಗಿಸಿ ದರ್ಶನ ಪಡೆಯುವ ಇಚ್ಛೆ ಭಕ್ತರಿಗೆ ಇದೆ. ದರ್ಶನ ಮುಕ್ತಾಯವಾದರೆ ಮತ್ತೆ ಒಂದು ವರ್ಷ ಅವಕಾಶ ಸಿಗಲ್ಲ. ಹೀಗಾಗಿ ಚರ್ಚಿಸಿ ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ ಮಾಡಿದ್ದೇವೆ’ ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.
ಸಂಬಂಧಿತ ಸುದ್ದಿಗಳು

ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5,000 ರೂಪಾಯಿ ಬರ ಪರಿಹಾರ ಸಿಗುವುದನ್ನು ಸರ್ಕಾರ ಖಚಿತಪಡಿಸಲಿದೆ : ಮಾಧ್ಯಮ ಪ್ರಕಟಣೆ ಮೂಲಕ ಡಾ. ಜಿ. ಪರಮೇಶ್ವರ್ ತಿರುಗೇಟು
ಬೆಂಗಳೂರು : ಬರ ಪರಿಹಾರ ವಿತರಣೆ ವಿಚಾರವಾಗಿ ವಿಪಕ್ಷಗಳು ಮಾಡುತ್ತಿರುವ ಸರಣಿ ಆರೋಪಗಳ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್…
◷ 10/11/2026
ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಕುಸಿತ !
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ್ದ ಉದ್ವಿಗ್ನತೆ ಶಮನಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ…
◷ 10/11/2026
ಮಂಡ್ಯದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಜೆಡಿಎಸ್ ಅಡ್ಡಿ: ಶಾಸಕ ಗಣಿಗ ರವಿ ಆರೋಪ
ಹಾಸನಾಂಬ ದೇವಿ ದರ್ಶನ ಪಡೆದ ಶಾಸಕ
◷ 10/11/2026
ಅನ್ನದಾತರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ : ಬಿ.ವೈ.ವಿಜಯೇಂದ್ರ ಕಿಡಿ
ಬೆಂಗಳೂರು : ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರಿಗೆ ಸಾಂತ್ವನ ಹೇಳಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ, ಕಿಂಚಿತ್ ಮಾನವೀಯತೆಯೂ ಇಲ…
◷ 10/11/2026
