ಬೆಂಗಳೂರು : ನಾನು ಸಿಎಂ ಆಗಿದ್ದಾಗ ರಿಯಲ್‌ ಎಸ್ಟೇಟ್‌ ನ ಬ್ಯುಸಿನೆಸ್‌ ಮಾಡಿದ್ರೆ, ಅದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನಾನು ಒಬ್ಬ ಮುಖ್ಯಮಂತ್ರಿಯಾಗಿ, ಜನಪ್ರತಿನಿಧಿಯಾಗಿ ಬ್ಯುಸಿನೆಸ್‌ ಮಾಡಿದ್ದರೆ ಅಂತಹ ಒಂದು ಪ್ರಕರಣ ನನ್ನಿಂದಾಗಿದ್ದರೆ ತೋರಿಸಿಕೊಡಲಿ. ಅವರು ಹೇಳಿದ್ದು ಕೇಳುತ್ತೇನೆ. ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ. ಮಾತನಾಡುವುದಕ್ಕೂ ಒಂದು ಇತಿಮಿತಿ ಇರಬೇಕು. ಬುದ್ಧನ ಸಿದ್ದಾರ್ಥನ ಹೆಸರಲ್ಲಿ ಸಿದ್ಧಾರ್ಥ ಟ್ರಸ್ಟ್‌ ಅಂತ ಏನು ಮಾಡಿದ್ದೀರಿ ನಿಮ್ಮಿಂದ ಕಲಿಯಬೇಕಾ? ಎಂದು ಹೇಳುವ ಮೂಲಕ ಸಚಿವ ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿದರು.ನಾನು ರಾಜಕಾರಣಕ್ಕೂ ಬರುವ ಮೊದಲು ಚಿತ್ರದ ಹಂಚಿಕೆ ಮಾಡುವಾಗ ಬಿಡದಿ ಬಳಿ 45ಎಕ್ರೆ ಭೂಮಿ ಖರೀದಿ ಮಾಡಿರೋದು. ಅದನ್ನು ಹೊರತುಪಡಿಸಿ ನಾನು ಯಾವುದೇ ರಿಯಲ್‌ ಎಸ್ಟೇಟ್‌ ಮಾಡಲು ಹೋಗಿಲ್ಲ. ಮಾಡಿದ್ದೆಲ್ಲ ನೀವುಗಳು, ನನ್ನ ಬಗ್ಗೆ ಚರ್ಚೆ ಮಾಡತಕ್ಕಂತ ನೈತಿಕತೆ ನಿಮಗೆ ಯಾರಿಗೂ ಇಲ್ಲ ಎಂದು ತಿಳಿಸಿದರು.ನಾನು ವೆಸ್ಟ್‌ ಎಂಡ್‌ ನಲ್ಲಿ ಇದ್ದರೆ 25 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಲು ಆಗತ್ತಾ?  ನಾನು ಅವಿವೇಕಿ, ಹಳ್ಳಿಗುಗ್ಗು ಆಗಿದ್ದರಿಂದಲೇ 25ಸಾವಿರ ಕೋಟಿ ರೈತರ ಸಾಲ ಒಂದೇ ಕಂತಿನಲ್ಲಿ ಕೊಟ್ಟೆ, ನಾನು ಇವರ ರೀತಿ 30%, 40% ತಗೊಂಡಿದ್ದರೆ ಹಳ್ಳಿಗುಗ್ಗು ಆಗುತ್ತಿರಲಿಲ್ಲ, ಅವಿವೇಕಿ ಆಗುತ್ತಿರಲಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.