ಬೆಂಗಳೂರು :‌ ಮಾಜಿ ಸಿಎಂ  ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಕಾಂಗ್ರೆಸ್ ನಾಯಕರೇ ಎನ್ನುವುದು ಸಾಬೀತಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ.ಸಿದ್ದರಾಮಯ್ಯನವರ ಸ್ಟಿಂಗ್‌ ಆಪರೇಶನ್‌, ಕಾಂಗ್ರೆಸ್‌ಗೆ ಸೋಲುವ ಸಿಚುವೇಶನ್‌! ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಟಿಂಗ್ ಆಪರೇಷನ್ ವಿವಾದದ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರೂ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ಮತದಾರರು ಕೂಡ ಕಾಂಗ್ರೆಸ್ ವಿರುದ್ಧ ನಿಂತಿದ್ದಾರೆ. ಇದರ ಪರಿಣಾಮ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಣಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಅವರು ಪರಿಹಾರ ನೀಡಲು ಗತಿ ಇಲ್ಲ, ಭಿಕ್ಷೆ ಬೇಡಲು ನಾಚಿಕೆ ಇಲ್ಲ! ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ  ಅವರ ಸರ್ಕಾರ, 2,500 ರೂ. ಚಿಲ್ಲರೆ ಕಾಸಿನ ಪರಿಹಾರವನ್ನು ಘೋಷಣೆ ಮಾಡಿದರೂ, ಅದು ರೈತರ ಕೈ ಸೇರಿಲ್ಲ. ಗ್ಯಾರಂಟಿ ಸಮಿತಿ ರಚಿಸಿಕೊಂಡು, ಕಮಿಶನ್‌ ಹೊಡೆದುಕೊಂಡು ಬದುಕುವ ಕಾಂಗ್ರೆಸ್‌ನ ವಸೂಲಿ ವೀರ ನಾಯಕರಿಗೆ ರೈತರ ಕಷ್ಟ ಆಲಿಸಿ ಹೆಚ್ಚಿನ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಇದರ ನಡುವೆ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್‌  ಅವರು ಮಾತ್ರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಭಿಕ್ಷೆ ಬೇಡುತ್ತಿದ್ದಾರೆ.  226 ತಾಲೂಕುಗಳಲ್ಲಿ ಬರಗಾಲವಿದ್ದು, 57.93 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 62,481.88 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರೈತರು ಬರ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕ ಪರಿಹಾರವನ್ನು ವಿತರಿಸಬೇಕೆ ಹೊರತು ಕೇಂದ್ರ ಸರ್ಕಾರವನ್ನು ಕಾಯುತ್ತಾ ಕೂರಬಾರದು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಪರಿಹಾರ ವಿತರಣೆ ಮಾಡುವುದು ಕಾಲಕಾಲಕ್ಕೆ ನಡೆಯುವ ಪ್ರಕ್ರಿಯೆ. ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರವನ್ನು ತನ್ನ ವತಿಯಿಂದ ವಿತರಿಸುವ ಪ್ರಕ್ರಿಯೆ ಮಾಡಬೇಕೇ ಹೊರತು ʼಬೇಡುವ ಪ್ರಕ್ರಿಯೆʼ ಮಾಡುತ್ತಾ ಕೂರಬಾರದು. ಬೇಡುವುದು ಬಿಡಿ, ನಿಮ್ಮ ಕಡೆಯಿಂದ ಕೊಡುವ ಕೆಲಸ ಮಾಡಿ. ಇಲ್ಲವಾದರೆ ನಮ್ಮ ಖಜಾನೆ ಖಾಲಿ ಎಂದು ಘೋಷಣೆ ಮಾಡಿ ಎಂದು ಬರೆದುಕೊಂಡಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಗೋಲ್‌ಮಾಲ್‌ ಲೆಕ್ಕಾಚಾರಗಳನ್ನು ಮಾಡಿ, ನಾನು ಮಾಡಿದ ಸಾಲ ಮಿತಿಯಲ್ಲೇ ಇದೆ ಎಂದು ತೋರಿಸಿದ್ದರು. ನಿಮ್ಮ ಸರ್ಕಾರದಲ್ಲಿ ಬೆಲೆ ಏರಿಕೆಯಲ್ಲೂ ಗೋಲ್‌ಮಾಲ್‌ ಲೆಕ್ಕಾಚಾರ ಮಾಡಿ ಮ್ಯಾಜಿಕ್‌ ಮಾಡಲಾಗಿದೆ. ಲೀಟರ್‌ ಹಾಲಿಗೆ 8 ರೂ. ಹೆಚ್ಚಿಸುವುದಾಗಿ ಹೇಳಿ, 13 ರೂ. ವರೆಗೆ ಹೆಚ್ಚಿಸಲಾಗಿದೆ.ಗಣಿತದ ಲೆಕ್ಕಾಚಾರದಲ್ಲಿ ಚೆನ್ನಾಗಿ ಪಳಗಿರುವ ಕಾಂಗ್ರೆಸ್‌, ಜನರ ಮುಂದೆ ಒಂದು ಹೇಳಿ, ಹಿಂದಿನಿಂದ ಮನಬಂದಂತೆ ಬೆಲೆ ಏರಿಸಿದೆ. ನಿಮ್ಮ ಗ್ಯಾರಂಟಿಗಳಿಗಾಗಿ ಈ ಬೆಲೆಗಳನ್ನು ಜನರು ತೆರಬೇಕಾಗಿದೆ. ಇನ್ನು ಬಸ್‌ ದರ ಏರಿಕೆಯಲ್ಲೂ ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ವಂಚನೆ ನಡೆಯುವುದು ಖಚಿತ. ನಿಮ್ಮ ಸುಳ್ಳಿನ  ಸರ್ಕಾರಕ್ಕೆ ಗ್ಯಾರಂಟಿಗಳನ್ನು ನಿರ್ವಹಿಸಲು ಆಗದೇ ಇದ್ದರೆ, ಸಾರ್ವಜನಿಕರ ಕ್ಷಮೆ ಕೇಳಿ ಅವುಗಳನ್ನು ರದ್ದು ಮಾಡಿ, ಬೆಲೆ ಏರಿಕೆಗಳನ್ನು ವಾಪಸ್‌ ಪಡೆಯಿರಿ ಎಂದು ಟ್ವೀಟರ್‌ ನಲ್ಲಿ ಆಗ್ರಹಿಸಿದ್ದಾರೆ.