ಮಂಡ್ಯ: ನಾಯಕರಾದವರು ನಡೆದು ಬಂದ ದಾರಿ ಸ್ಮರಿಸಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು  ಸಚಿವ ಚಲುವರಾಯಸ್ವಾಮಿಗೆ ಟಾಂಗ್‌ ನೀಡಿದರು.ಮಂಡ್ಯದಲ್ಲಿ  ಸುದ್ದಿಗೋಷ್ಠಿ ನಡೆಸಿ  ಕನ್ನಡ ರಾಜ್ಯೋತ್ಸವದಂದು ಸಚಿವ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನಾಯಕರಾದವರು ನಡೆದು ಬಂದ ದಾರಿ ಸ್ಮರಿಸಬಕು ಎನ್ನುವ ಮೂಲಕ ರಾಜಕೀಯದಲ್ಲಿ ತಾನು ಹಿರಿಯ ಎಂಬುದನ್ನು ನೆನಪಿಸಿದರು.ಚಲುವರಾಯಸ್ವಾಮಿ ರಾಜಕೀಯ ಪ್ರವೇಶ ಹೇಗಾಯ್ತು ಎಂದು ತಿಳಿಸಿದರು. ಅಸಮಾಧಾನಗೊಂಡಿದ್ದ ಚಲುವರಾಯಸ್ವಾಮಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ಹೆಚ್.ಡಿ.ಕುಮಾರಸ್ವಾಮಿಯವರು. ಜಿಲ್ಲೆಗೆ ಸಮ್ಮಿಶ್ರ ಸರ್ಕಾರ ಇದ್ದಾಗ ಜೆಡಿಎಸ್‌ ಕೊಟ್ಟ ಕೊಡುಗೆಗಳನ್ನು ಮರೆತಿದ್ದಾರೆ ಅನ್ನಿಸುತ್ತೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಬ್ ಸ್ಟೇಷನ್ ಗಳು ಕೊಟ್ಟಿದ್ದೆವು. ಸರ್ಕಾರಿ ಶಾಲೆ, ಪಿಯು, ಡಿಗ್ರಿ, ಐಟಿಐ, ಪಾಲಿಟೆಕ್ನಿಕ್ ಕಾಲೇಜು, ಕೆಎಸ್‌ ಆರ್‌ ಟಿಸಿ ಬಸ್ ಸ್ಟ್ಯಾಂಡ್ ಗಳನ್ನು ಕೊಟ್ಟಿದ್ದೇವೆ. ಈ ವಿಚಾರವಾಗಿ ಓಪನ್ ಚರ್ಚೆ ಆಗಲಿ. ಗೌರವಯುತವಾಗಿ ಮಾತನಾಡುವುದನ್ನು ಕಲಿಯಿರಿ ಎಂದು ಸಲಹೆ ನೀಡಿದರು.ಪ್ರಧಾನಿ ಜೊತೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವವರು ಕುಮಾರಸ್ವಾಮಿ.ಜಿಲ್ಲಾ ಮಂತ್ರಿಯಾಗಿ ಏಕವಚನದಲ್ಲಿ ಮಾತನಾಡುವುದು ನಿಮಗೆ ಗೌರವ ಕೊಡುತ್ತಾ?. ಸಾಮಾನ್ಯ ಕಾರ್ಯಕರ್ತನ ಮೂಲಕ ಝಾಡಿಸಿ ಬಿಡ್ತೇವೆ ಹುಷಾರ್ ಎಂದು ಎಚ್ಚರಿಕೆ ನೀಡಿದರು. ಮುದ್ದನಘಟ್ಟದಲ್ಲಿ ARAI ಕೇಂದ್ರ ತೆರೆಯಲು ಜಾಗ ಗುರುತಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ಮಾಡಿದರು. ಎಂ.ಬಿ.ಪಾಟೀಲ್ ನೀಡಿದ ಸಲಹೆಯನ್ನು ಅಭಿನಂದಿಸುತ್ತೇವೆ.ಎಲೆಚಾಕನಹಳ್ಳಿ ಭಾಗದಲ್ಲಿ ಮಾಡಲು ಕೂಡ ಜಾಗ ನೋಡಿದೆವು. ಅದರ ಮಾಹಿತಿ ಗುರುತಿಸಿದ ನಂತರ ಎಂ.ಬಿ.ಪಾಟೀಲ್ ಸೂಕ್ತ ಜಾಗ ಎಂದರು. ಮುದ್ದನಘಟ್ಟ ಭಾಗದ ಜಾಗ ಸೂಕ್ತವಲ್ಲ.ಒಂದು ಕಡೆ 70 ಎಕರೆ, ಮತ್ತೊಂದು ಕಡೆ 30 ಎಕರೆ, ಅದರ ಮಧ್ಯೆ ಸ್ವಂತ ಹಿಡುವಳಿದಾರರ ಜಮೀನು ಇದೆ. 1000 ಕೋಟಿ ಕ್ಯಾಬಿನೆಟ್ ನಲ್ಲಿ ಅಪ್ರೂವಲ್ ಮಾಡಿಸಿ ಕುಮಾರಸ್ವಾಮಿ ಎತ್ತಿಟ್ಟಿದ್ದಾರೆ .ಈ ಹಿಂದೆ ನಾನೇ ನಿಮ್ಮನ್ನು ಡೆಡ್ ಹಾರ್ಸ್ ಅಂದಿದ್ದೆ. ಇವತ್ತು ನಾವೇ ಡೆಡ್ ಹಾರ್ಸ್ ಆಗಿದ್ದೇವೆ. 2028ಕ್ಕೆ ಡೆಡ್ ಹಾರ್ಸ್ ಯಾರು ಅನ್ನೋದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.ಏಕ ವಚನ ಪ್ರಯೋಗ ಬಿಡಬೇಕು. ಎಲ್ಲದಕ್ಕೂ ಅಡ್ಡಿಪಡಿಸೋದು ಒಳ್ಳೆಯದಲ್ಲ. ನೀವು ಹತ್ತಲ್ಲ, ಇನ್ನು ಹತ್ತಾರು ಸಾವಿರ ಕೋಟಿ ತಂದು ಅಭಿವೃದ್ಧಿ ಮಾಡಿ.ಆದರೆ ಎಲ್ಲದಕ್ಕೂ ಅಡ್ಡಿಪಡಿಸೋದು. ಏಕವಚನದಲ್ಲಿ ಮಾತಾನಾಡೋದನ್ನ ಕೂಡಲೇ ನಿಲ್ಲಿಸಬೇಕು.ಇಲ್ಲವಾದರೆ ಜಿಲ್ಲೆಯ ಕಾರ್ಯಕರ್ತರು ಸುಮ್ಮನೆ ಬಿಡಲ್ಲ. ಜಿಲ್ಲೆಯಲ್ಲಿ ಓಡಾಡದಂತೆ ಮಾಡುತ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು. ಈ ಜಿಲ್ಲೆ ಬಗ್ಗೆ ಕಳಕಳಿ ಇದ್ದರೆ, ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಓಪನ್ ಮೀಟಿಂಗ್ ಕರೆಯಿರಿ. ನಮ್ಮ ಜವಾಬ್ದಾರಿ ಏನು? ನಿಮ್ಮ ಜವಾಬ್ದಾರಿ ಏನು ಚರ್ಚೆ ಮಾಡಿ, ಕೆಲಸ ಮಾಡೋಣ. ಸುಖಾ ಸುಮ್ಮನೇ ಆರೋಪ, ಏಕವಚನ ಪ್ರಯೋಗ ಮಾಡಬೇಡಿ ಎಂದರು.ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು ಹೌದು ನಾವು ಹಳ್ಳಿಯವರೇ, ಹಳ್ಳಿ ಗುಗ್ಗುಗಳೇ. ಏನೇನೋ ಮಾತನಾಡೋ ಇವಕ್ಕೆಲ್ಲ ಏನು ಬಂದಿದೆಯೋ ಗೊತ್ತಿಲ್ಲ. ದೆವ್ವ ಮೆಟ್ಟಿಕೊಂಡಿದ್ದರೆ ಬಿಡಿಸಬೇಕಿದೆ. ಬಾಗಿಲು ಹಾಕೊಂಡು ನಿಮ್ಮ ಅಪ್ಪನ ಮುಂದೆ ಕೇಳಿ. ದೇವೇಗೌಡರು ಏನು ಎತ್ತ ಅನ್ನೋದನ್ನು ಹೇಳ್ತಾರೆ. 2028ಕ್ಕೆ ಜನ ಬೆಂಕಿ ಇಡ್ತಾರೆ ಎಂದರು.