ಮಂಡ್ಯ : ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವ ನೈತಿಕತೆ ಪ್ರಿಯಾಂಕ್‌ ಖರ್ಗೆ ಅವರಿಗೆ ಇಲ್ಲ ಎಂದು  ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಾಗ್ದಾಳಿ ನಡೆಸಿದರು.ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಕುಮಾರಸ್ವಾಮಿಯವರನ್ನು  ಹಳ್ಳಿ ಗುಗ್ಗು ಅಂತಿರಲ್ಲ.ಅವರ ಬಗ್ಗೆ ಮಾತನಾಡೋದಕ್ಕೆ ಪ್ರಿಯಾಂಕ್ ಖರ್ಗೆಗೆ ನೈತಿಕತೆ ಇಲ್ಲ. ಕುಮಾರಸ್ವಾಮಿಯವರು ಬಿಎಸ್ಸಿ ಪಾಸ್ ಮಾಡಿದ್ದಾರೆ ನಾಲೆಡ್ಜ್ ಇದೆ. ಗೃಹಸಚಿವರೇ ನಿಮ್ಮದು ಯಾವ ಡಿಗ್ರಿ, ನಿಮ್ಮದು ಪಿಯುಸಿ ನಾಲೆಡ್ಜ್. ಅದಕ್ಕೆ ಈ ರೀತಿ ಮಾತನಾಡಿದ್ದೀರಿ. ಹಳ್ಳಿಯವರು ದಡ್ಡರು ಅಂತನಾ? ಕಾಂಗ್ರೆಸ್ ಪಕ್ಷ ಹಾಳು ಮಾಡಲು ನೀವು ಮಾಡುತ್ತಿದ್ದೀರಿ,ನಿಮ್ಮ ಗೌರವಕ್ಕೆ ತಕ್ಕ ಹಾಗೆ ಮಾತನಾಡಿ. ಮಲ್ಲಿಕಾರ್ಜುನ ಖರ್ಗೆ ಮೂಲ ಯಾವುದು? ಕರ್ನಾಟಕದವರ ನೀವು? ಆಂಧ್ರ ಪ್ರದೇಶದವರು ನೀವು.ಕರ್ನಾಟಕಕ್ಕೆ ಯಾಕೆ ಬಂದ್ರಿ? ಕೇಂದ್ರ ಮಂತ್ರಿಗಳು ಈ ರಾಜ್ಯ ಆಳಿದ್ದಾರೆ. ಜನರು ಮೆಚ್ಚುವ ರೀತಿ ಆಡಳಿತ ಮಾಡಿದ್ದಾರೆ.ಹಳ್ಳಿಯವರನ್ನು ಹಿಯಾಳಿಸುವುದನ್ನು ಬಿಡಬೇಕು. ಮುಂದೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.