ಮೈಸೂರು :  ಕುಮಾರಸ್ವಾಮಿ ಹಳ್ಳಿ ಗುಗ್ಗು ಇದರಲ್ಲಿ ಯಾವ ಅನುಮಾನ ಬೇಡ. ರೈತರ ಪರ ಕೆಲಸ ಮಾಡಿದ ಎಚ್.ಡಿ. ದೇವೇಗೌಡರ ಮಗ ಕುಮಾರಸ್ವಾಮಿ. ಕುಮಾರಸ್ವಾಮಿ ಕೂಡ ರೈತರ ಸಾಲ ಮನ್ನಾ ಮಾಡಿದ್ದರು. ಅವರು ಹಳ್ಳಿಗುಗ್ಗುನೆ  ಪ್ರಿಯಾಂಕಾ ಖರ್ಗೆ ಸರಿಯಾಗಿಯೇ ಸಂಬೋಧನೆ ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್‌ ಹೇಳಿದರು.ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗುರುಮಿಟಕಲ್ ಕ್ಷೇತ್ರದಲ್ಲಿ ನಿಮ್ಮ ಅಪ್ಪನನ್ನು ಗೆಲ್ಲಿಸಿದ್ದು ಕೂಡ ಹಳ್ಳಿ ಗುಗ್ಗುಗಳೆ, ಚಿತ್ತಾಪುರದಲ್ಲಿ ನಿಮಗೆ ಮತ ಹಾಕಿದವರು ಹಳ್ಳಿ ಗುಗ್ಗುಗಳೆ, ಖರ್ಗೆ ಅಣ್ಣ ಚಿತ್ತಾಪುರನ ಚಿಕಾಗೋ ಮಾಡಿದ್ದೀರಾ ಎಂದು ವ್ಯಂಗ್ಯವಾಡಿದರು.- ಚಿತ್ತಾಪುರದಲ್ಲಿ ಇರೋದು ಹಳ್ಳಿಗುಗ್ಗು ಗಳು ಅದಕ್ಕೆ ನೀವು ಬೆಂಗಳೂರು ನಗರದಲ್ಲೆ ಚುನಾವಣೆಗೆ ನಿಲ್ಲಿ. ಪಿಯುಸಿ ಫೇಲಾದಾ ನೀವು ಈ ರಾಜ್ಯದ ಗೃಹ ಮಂತ್ರಿ. ನಿಮ್ಮ ಮ್ಯಾಜಿಕ್ ನಮಗೆ ಗೊತ್ತಾಗುತ್ತಿಲ್ಲ. ನಿಮಗೆ ಸಿಕ್ಕ ಸಿರಿವಂತ ಅಪ್ಪ ಹಳ್ಳಿಗುಗ್ಗುಗಳಿಗೆ ಸಿಕ್ಕಿಲ್ಲ. ನಿಮ್ಮ ಮಾತಿನ ಚಾಳಿ ನಿಮ್ಮ ಅಪ್ಪನಿಗೂ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಲ್ಲಿ ಬರೀ ಕೂಗು ಮಾರಿಗಳೆ ತುಂಬಿದ್ದಾರೆ. ಪ್ರಿಯಾಂಕಾ ಖರ್ಗೆ ಅದರ ಮುಂಚೂಣಿಯಲ್ಲಿದ್ದಾರೆ.  ಪ್ರಿಯಾಂಕಾ ಖರ್ಗೆ, ಕೆಪಿಸಿಸಿ ಅಧ್ಯಕ್ಷ, ಚಿಕ್ಕಬಳ್ಳಾಪುರದ ಶಾಸಕ, ಕಲಘಟಗಿ ಸಚಿವ ಎಲ್ಲಾ ಕೂಗು ಮಾರಿಗಳು ಎಂದರು. ಸಿದ್ದರಾಮಯ್ಯ ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ. ಶಕ್ತಿ ಯೋಜನೆಯಿಂದ ಸಾರಿಗೆ ವಿಭಾಗಗಳು ಲಾಭ ಮಾಡುತ್ತಿವೆ ಎಂದು ಸಿದ್ದರಾಮಯ್ಯ ಪ್ರಚಾರ ತೆಗೆದುಕೊಂಡರು. ಈಗ ಸಾರಿಗೆ ಸಚಿವ  ಬೈರತಿ ಸುರೇಶ್ ಸಾರಿಗೆ ವಿಭಾಗಗಳು 9 ಸಾವಿರ ಕೋಟಿ ರೂ. ಸಾಲದಲ್ಲಿವೆ ಎಂದು ಹೇಳುತ್ತಿದ್ದಾರೆ. ರಾಜ್ಯದ ಅರ್ಥ ವ್ಯವಸ್ಥೆ ಏನಾಗಿದೆ.  ಒಂಭತ್ತುವರೆ ಲಕ್ಷ ಕೋಟಿ ರೂ. ಸಾಲದಲ್ಲಿ ರಾಜ್ಯ ಇದೆ.  ಡಿ.ಕೆ ಶಿವಕುಮಾರ್ ಈಗಲಾದರೂ ಜನರಿಗೆ  ನಾವು ಸುಳ್ಳು ಹೇಳಿದ್ದೇವೆ. ನಾವು ನಿಮಗೆ ಟೋಪಿ ಹಾಕಿ ಮತ ಪಡೆದವು ಎಂದು ಸತ್ಯ ಹೇಳಲಿ ಎಂದು ಟೀಕಿಸಿದರು.ಮುಂದಿನ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಅನ್ನು ಒದ್ದು ಓಡಿಸುತ್ತಾರೆ. ಡಿಕೆ ಶಿವಕುಮಾರ್ ಸಾಹುಕಾರ್ ಆಗುತ್ತಲೆ ಇದ್ದಾರೆ‌. ಅವರ ಸಂಪುಟದಲ್ಲೂ ಹಲವರು ಸಾಹುಕಾರ್ ಗಳಾಗಿದ್ದಾರೆ. ಸರಕಾರ ಮಾತ್ರ ಬಡವಾಗ್ತಿದೆ. ಡೆತ್, ಬರ್ತ್ ಸರ್ಟಿಫಿಕೇಟ್ ಗೂ ಹಣ ಜಾಸ್ತಿ ಮಾಡಿದ್ದಾರೆ. ಇದು ಜನರ ಸುಲಿಗೆ ಮಾಡುವ ಸರಕಾರ.  ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಗೆ ಚೆನ್ನಾಗಿ ಟೋಪಿ ಇಟ್ಟು ತಾವು ಸೇಫ್ ಆದರು. ಮಧು ಬಂಗಾರಪ್ಪ ಬಹಳ ಮಾತಾಡುತ್ತಾರೆ. ಶಾಲೆಯ ಮುಖ್ಯ ಶಿಕ್ಷಕರಿಗೆ ಆರು ತಿಂಗಳಿಂದ ಶಾಲಾ ಖರ್ಚು ವೆಚ್ಚದ ಹಣ ಕೊಟ್ಟಿಲ್ಲ. ಡಿಕೆ ಶಿವಕುಮಾರ್ ಅವರ ಕುಟುಂಬ ಮೃಷ್ಟಾನ್ನ ಭೋಜ‌ನ‌ ಮಾಡುತ್ತಿದೆ. ಕೇಂದ್ರ ಸರಕಾರದ  ಮೇಲೆ ಗೂಬೆ ಕೂರಿಸುವುದು ಬಿಟ್ಟು ರಾಜೀನಾಮೆ ಕೊಡಿ ಚುನಾವಣೆಗೆ ಹೋಗೋಣ. ಕಾಂಗ್ರೆಸ್ ಈ ರಾಜ್ಯವನ್ನು ಸಾಲ‌ಪೀಡಿತ  ದಿವಾಳಿ ರಾಜ್ಯ ಮಾಡಿದೆ ಎಂದು ಹರಿಹಾಯ್ದರು.