ಜನತೆಗೆ ಗುಣಮಟ್ಟದ, ಸಮಯಕ್ಕೆ ಸಿಗುವ ಆರೋಗ್ಯ ಸೇವೆ ನೀಡುವುದು ನಮ್ಮ ಬದ್ಧತೆ : ಸಚಿವ ಯು.ಟಿ.ಖಾದರ್

ಬಳ್ಳಾರಿ : ರಾಜ್ಯದ ಜನತೆಗೆ ಗುಣಮಟ್ಟದ, ಸಮಯಕ್ಕೆ ಸಿಗುವ ಆರೋಗ್ಯ ಸೇವೆ ನೀಡುವುದು ನಮ್ಮ ಬದ್ಧತೆ. ಅದಕ್ಕಾಗಿಯೇ ಆರೋಗ್ಯ ಇಲಾಖೆಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್ ನೇಮಕಾತಿ ನಡೆಸಲಾಗುತ್ತಿದೆ. ನೇರ ನೇಮಕಾತಿಗೆ ಅವಕಾಶ ನೀಡಿದ ತಕ್ಷಣವೇ ರಾಜ್ಯಾದ್ಯಂತ 200ಕ್ಕೂ ಹೆಚ್ಚು ವೈದ್ಯರು ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೇರ್ಪಡೆಯಾಗಿದ್ದಾರೆ. ಪ್ರತಿ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಲ್ಯಾಬ್ ಟೆಕ್ನಿಷಿಯನ್ ಮತ್ತು ಫಾರ್ಮಸಿಸ್ಟ್‌ಗಳನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡಿದ್ದೇವೆ ಎಂದರು.ಹಳ್ಳಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಅಲ್ಲಿಂದ ತಾಲೂಕು ಆಸ್ಪತ್ರೆಗೆ 20-25 ನಿಮಿಷದಲ್ಲಿ ರೋಗಿಯನ್ನು ತಲುಪಿಸುವ ವ್ಯವಸ್ಥೆಯನ್ನು ಈ ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣವಾಗಿ ಜಾರಿಗೆ ತರುತ್ತೇವೆ.ಮುಖ್ಯಮಂತ್ರಿಗಳು ಮತ್ತು ಆರ್ಥಿಕ ಇಲಾಖೆ 350 ಹೊಸ ಆಂಬುಲೆನ್ಸ್‌ಗಳಿಗೆ ಒಪ್ಪಿಗೆ ನೀಡಿದ್ದಾರೆ. ಈಗಿರುವ 450 ಆಂಬುಲೆನ್ಸ್‌ಗಳ ಜೊತೆ ಸೇರಿ ಒಟ್ಟು 800 ಆಂಬುಲೆನ್ಸ್‌ಗಳ ಬಲಿಷ್ಠ ಜಾಲ ಸಿದ್ಧವಾಗಲಿದೆ. ಆಂಬುಲೆನ್ಸ್ ವಿಳಂಬವಾದರೆ ನಿರ್ವಹಣಾ ಸಂಸ್ಥೆಗೆ ರೂ. 3,000 ದಂಡ ವಿಧಿಸುವ ಕಟ್ಟುನಿಟ್ಟಿನ ಷರತ್ತು ಕೂಡ ಹಾಕಿದ್ದೇವೆ. ಸ್ವಚ್ಛತೆ, ಚಾಲಕರು ಮತ್ತು ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಅವರದ್ದೇ ಎಂದರು.ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕಾತಿಯ ಜೊತೆಗೆ 5 ICU ಬೆಡ್‌ಗಳನ್ನು ಸ್ಥಾಪಿಸುತ್ತೇವೆ. ಸಾಮಾನ್ಯ ತುರ್ತು ಪ್ರಕರಣಗಳಿಗೂ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಇರಬಾರದು. ತಾಲೂಕಿನಲ್ಲೇ ಚಿಕಿತ್ಸೆ ಸಿಗಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ, ಜಿಲ್ಲಾ ಆಸ್ಪತ್ರೆಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಎಂದು ತಿಳಿಸಿದರು. ದೇಶದಲ್ಲೇ ಎಲ್ಲಿಯೂ ಇಲ್ಲದಂತಹ ಪ್ರತ್ಯೇಕ ಮಹಿಳಾ ಆರೋಗ್ಯ ನೀತಿಯನ್ನು (Women Health Policy) ನಮ್ಮ ರಾಜ್ಯದಲ್ಲಿ ಜಾರಿಗೆ ತರುತ್ತಿದ್ದೇವೆ.ಹುಟ್ಟಿನಿಂದ ವೃದ್ಧಾಪ್ಯದವರೆಗೆ ಮಹಿಳೆಯರಿಗೆ ಬೇಕಾದ ರೋಗ ತಡೆ ಮತ್ತು ಚಿಕಿತ್ಸಾ ಸೇವೆಗಳಿಗಾಗಿ ಪ್ರತ್ಯೇಕ ವಿಭಾಗ ರಚಿಸಿ, ಪ್ರತ್ಯೇಕ ಉಪನಿರ್ದೇಶಕರನ್ನು (DD) ನೇಮಕ ಮಾಡುತ್ತೇವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ತರುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತ ಆರೋಗ್ಯ ಸೇವೆ ಸಿಗುವಂತೆ ಮಾಡುವುದೇ ನಮ್ಮ ಮುಖ್ಯ ಗುರಿ ಎಂದರು.
ಸಂಬಂಧಿತ ಸುದ್ದಿಗಳು

ಕ್ಯಾನ್ಸರ್ ಔಷಧಿಗಳ ಬೆಲೆ ಭಾರೀ ಇಳಿಕೆ
ನವದೆಹಲಿ : ಕೇಂದ್ರ ಸರ್ಕಾರವು ಕ್ಯಾನ್ಸರ್ ನಿರೋಧಕ 1,364 ಔಷಧಿ ಫಾರ್ಮುಲೇಶನ್ಗಳ ಪರಿಷ್ಕೃತ ಬೆಲೆಗಳನ್ನು ಜಾರಿಗೆ ತಂದಿದ್ದು, ಸುಮಾ…
◷ 09/11/2026
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ : ಕ್ಯಾನ್ಸರ್ ತಪಾಸಣೆ,ಜಾಗೃತಿಗೆ ಕೇಂದ್ರ ಆರೋಗ್ಯ ಸಚಿವರ ಕರೆ
ನವದೆಹಲಿ: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರ…
◷ 07/11/2026
ಔಷಧ ಉತ್ಪಾದನೆಗೆ ಡಬ್ಲ್ಯೂಎಚ್ಒ ನಿಯಮ ಅನ್ವಯ : ಆರೋಗ್ಯ ಸಚಿವಾಲಯದಿಂದ ಸಲಹೆ, ಆಕ್ಷೇಪಣೆ ಆಹ್ವಾನ
ನವದೆಹಲಿ : ಸ್ಟೆರೈಲ್ (ಸೋಂಕುರಹಿತ) ಔಷಧಗಳ ಉತ್ಪಾದನೆಯಲ್ಲಿ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಬಲಪಡಿಸುವ ಉದ್ದೇಶದಿಂದ ಕೇಂ…
◷ 04/11/2026
ಏಮ್ಸ್ ರಾಜ್ ಕೋಟ್ ನಲ್ಲಿ ಸುಧಾರಿತ ರೇಡಿಯೋಥೆರಪಿ ಸೌಲಭ್ಯ ಉದ್ಘಾಟನೆ
ಸೌರಾಷ್ಟ್ರದ 1.54 ಕೋಟಿ ಜನರಿಗೆ ಅನುಕೂಲ
◷ 03/11/2026
