ಟಿಪ್ಪು ದೂರದೃಷ್ಠಿ ಯೋಜನೆಗಳು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು : ಯು.ಟಿ.ಖಾದರ್

ಮಂಡ್ಯ : ಮಂಡ್ಯದ
ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಟಿಪ್ಪು ಸಮಾಧಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು.
ಟಿಪ್ಪು ಜಯಂತಿಯಲ್ಲಿ ಸಚಿವ ಯುಟಿ ಖಾದರ್ ಭಾಗಿಯಾದರು. ಟಿಪ್ಪು ಸಮಾಧಿಗೆ ಹೂವಿನ
ಚಾದರ ಹೊದಿಸುವ ಮೂಲಕ ಆಚರಣೆ ಮಾಡಲಾಯಿತು. ಟಿಪ್ಪು ಸುಲ್ತಾನ್ ಸಮಾಧಿಗೆ ನಮಿಸಿ ಪ್ರಾರ್ಥನೆ ಸಲ್ಲಿಸಿದರು.ಸಚಿವ
ಯು.ಟಿ.ಖಾದರ್ ಗೆ ಶಾಸಕ ತನ್ವೀರ್ ಸೇಠ್ ಸಾಥ್ ನೀಡಿದರು.
ಈ ಸಂದರ್ಭ ಸಚಿವ ಯು.ಟಿ.ಖಾದರ್ ಮಾತನಾಡಿ ಟಿಪ್ಪು
ಅವರ ದೂರದೃಷ್ಠಿ ಯೋಜನೆಗಳು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು ಎಂದರು. ಟಿಪ್ಪು ಸುಲ್ತಾನ್ ಹಜರತ್
ಅವರ ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದು ಸಂತೋಷವಾಗಿದೆ. ಶಾಲೆಯಲ್ಲಿರುವಾಗಲೇ ನಾವು ಇಲ್ಲಿಗೆ ಬರುತ್ತಿದ್ವಿ.
ಈ ಸಂದರ್ಭದಲ್ಲಿ ಅವರು ದೇಶಕ್ಕೆ ಕೊಟ್ಟ ಕೊಡುಗೆ, ಚಿಕ್ಕವರಿರುವಾಗಲೇ ಅವರು ನೀಡಿದ ಕೊಡುಗೆ ಓದಿ ತಿಳಿದುಕೊಂಡಿದ್ವಿ,
ಆ ಕಾಲದಲ್ಲಿಯೇ ತಂತ್ರಜ್ಞಾನವನ್ನು ತಂದಿದ್ದು, ಈ ದೇಶಕ್ಕಾಗಿ ತನ್ನ ಪ್ರಾಣವನ್ನು ಬಿಟ್ಟಿದ್ದು ಮಾತ್ರವಲ್ಲ,
ಮಕ್ಕಳನ್ನು ಜಾಗ ಬಿಡಿಸಲು ಅಡವಿಟ್ಟಿದ್ದ. ಮಕ್ಕಳು, ಯುವ ಜನತೆ ಇತಿಹಾಸವನ್ನು ತಿಳಿದುಕೊಳ್ಳಬೇಕು.
ಶಾಸಕ ತನ್ವೀರ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ಕೆಲಸ, ಕಾರ್ಯ ಚೆನ್ನಾಗಿ ನಡೀತಿದೆ. ನನ್ನಿಂದ ಸಂಪೂರ್ಣ
ಸಹಕಾರವನ್ನು ಅವರಿಗೆ ನೀಡುತ್ತೇನೆ ಎಂದರು.
ಸಂಬಂಧಿತ ಸುದ್ದಿಗಳು

ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5,000 ರೂಪಾಯಿ ಬರ ಪರಿಹಾರ ಸಿಗುವುದನ್ನು ಸರ್ಕಾರ ಖಚಿತಪಡಿಸಲಿದೆ : ಮಾಧ್ಯಮ ಪ್ರಕಟಣೆ ಮೂಲಕ ಡಾ. ಜಿ. ಪರಮೇಶ್ವರ್ ತಿರುಗೇಟು
ಬೆಂಗಳೂರು : ಬರ ಪರಿಹಾರ ವಿತರಣೆ ವಿಚಾರವಾಗಿ ವಿಪಕ್ಷಗಳು ಮಾಡುತ್ತಿರುವ ಸರಣಿ ಆರೋಪಗಳ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್…
◷ 10/11/2026
ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಕುಸಿತ !
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ್ದ ಉದ್ವಿಗ್ನತೆ ಶಮನಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ…
◷ 10/11/2026
ಮಂಡ್ಯದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಜೆಡಿಎಸ್ ಅಡ್ಡಿ: ಶಾಸಕ ಗಣಿಗ ರವಿ ಆರೋಪ
ಹಾಸನಾಂಬ ದೇವಿ ದರ್ಶನ ಪಡೆದ ಶಾಸಕ
◷ 10/11/2026
ಅನ್ನದಾತರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ : ಬಿ.ವೈ.ವಿಜಯೇಂದ್ರ ಕಿಡಿ
ಬೆಂಗಳೂರು : ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರಿಗೆ ಸಾಂತ್ವನ ಹೇಳಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ, ಕಿಂಚಿತ್ ಮಾನವೀಯತೆಯೂ ಇಲ…
◷ 10/11/2026
