ಯಶಸ್ವಿ ಜೈಸ್ವಾಲ್ ಬದಲಿಗೆ ಪೂರನ್, ರಾಜಸ್ಥಾನದ 3 ಆಟಗಾರರು ಲಕ್ನೋಗೆ!

ನವದೆಹಲಿ : ಐಪಿಎಲ್ 2027ರ ಹರಾಜಿಗೂ ಮುನ್ನ ಟ್ರೇಡ್ ವಿಂಡೋ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಈಗಾಗಲೇ ಹಲವು ಪ್ರಮುಖ ಆಟಗಾರರು ತಂಡಗಳನ್ನು ಬದಲಾಯಿಸಿದ್ದಾರೆ. ಒಟ್ಟು 8 ಟ್ರೇಡ್ ಡೀಲ್‌ಗಳು ಅಧಿಕೃತವಾಗಿ ಪೂರ್ಣಗೊಂಡಿದ್ದು, ಇನ್ನು ಕೆಲವು ಬಿಗ್ ಡೀಲ್‌ಗಳು ಅಂತಿಮ ಹಂತದಲ್ಲಿವೆ.ಹಾರ್ದಿಕ್ ಪಾಂಡ್ಯ - ಅರ್ಷದೀಪ್ ಸಿಂಗ್:ಮುಂಬೈ ಇಂಡಿಯನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ಸೇರ್ಪಡೆಯಾಗಲಿದ್ದು, ಬದಲಾಗಿ ಪಂಜಾಬ್‌ನಿಂದ ವೇಗಿ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್‌ಗೆ ಬರಲಿದ್ದಾರೆ. ಈ ಡೀಲ್ ಗೆ ಸೂಕ್ತ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.ಯಶಸ್ವಿ ಜೈಸ್ವಾಲ್ - ನಿಕೋಲಸ್ ಪೂರನ್ / ಜೋಶ್ ಇಂಗ್ಲಿಸ್:ವರದಿಗಳ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತೊರೆದು ಯಶಸ್ವಿ ಜೈಸ್ವಾಲ್ ಲಕ್ನೋ ಸೂಪರ್ ಜೈಂಟ್ಸ್ ಸೇರುವ ಸಾಧ್ಯತೆಯಿದೆ. ಬದಲಾಗಿ ಲಕ್ನೋದಿಂದ ನಿಕೋಲಸ್ ಪೂರನ್ ಅಥವಾ ಜೋಶ್ ಇಂಗ್ಲಿಸ್ ರಾಜಸ್ಥಾನ್ ಸೇರಬಹುದು. ಈ ಒಪ್ಪಂದದಲ್ಲಿ ಒಟ್ಟು ಮೂರು ಆಟಗಾರರ ವಿನಿಮಯ ನಡೆಯಲಿದ್ದು, ರಾಜಸ್ಥಾನ್‌ನಿಂದ ಜೈಸ್ವಾಲ್, ಸಂದೀಪ್ ಶರ್ಮಾ ಮತ್ತು ವಿಘ್ನೇಶ್ ಪುತ್ತೂರ್ ಲಕ್ನೋಗೆ ಸೇರಬಹುದು ಹಾಗೂ ಲಕ್ನೋದ ಪ್ರಿನ್ಸ್ ಯಾದವ್ ಜೊತೆಗೆ ಪೂರನ್ ಅಥವಾ ಇಂಗ್ಲಿಸ್ ರಾಜಸ್ಥಾನ್ ರಾಯಲ್ಸ್‌ಗೆ ಬರಬಹುದು ಎನ್ನಲಾಗಿದೆ.ಪ್ರಸಿದ್ಧ್ ಕೃಷ್ಣ - ಆಶುತೋಷ್ ಶರ್ಮಾ:ಗುಜರಾತ್ ಟೈಟನ್ಸ್ ತನ್ನ ವೇಗಿ ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಫಿನಿಶರ್ ಆಶುತೋಷ್ ಶರ್ಮಾ ಅವರನ್ನು ಪಡೆಯಲು ಆಫರ್ ನೀಡಿದೆ ಎಂಬ ವರದಿಗಳಿವೆ. ರಿಷಬ್ ಪಂತ್ – ಲಕ್ನೋ ಸೂಪರ್ ಜೈಂಟ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ (₹15 ಕೋಟಿ),ಕುಲದೀಪ್ ಯಾದವ್ – ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ಗೆ (₹13.50 ಕೋಟಿ),ಟಿ. ನಟರಾಜನ್ – ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಸನ್‌ರೈಸರ್ಸ್ ಹೈದರಾಬಾದ್‌ಗೆ (₹5 ಕೋಟಿ),ಜೀಶನ್ ಅನ್ಸಾರಿ – ಸನ್‌ರೈಸರ್ಸ್ ಹೈದರಾಬಾದ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ (₹40 ಲಕ್ಷ),ಲಿಯಾಮ್ ಲಿವಿಂಗ್‌ಸ್ಟೋನ್ – ಸನ್‌ರೈಸರ್ಸ್ ಹೈದರಾಬಾದ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ (₹6 ಕೋಟಿ),ಖಲೀಲ್ ಅಹ್ಮದ್ – ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಸನ್‌ರೈಸರ್ಸ್ ಹೈದರಾಬಾದ್‌ಗೆ (₹4.8 ಕೋಟಿ),ಜ್ಯಾಕ್ ಎಡ್ವರ್ಡ್ಸ್ – ಸನ್‌ರೈಸರ್ಸ್ ಹೈದರಾಬಾದ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ (₹3 ಕೋಟಿ),,ನಾಥನ್ ಎಲ್ಲಿಸ್ – ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಸನ್‌ರೈಸರ್ಸ್ ಹೈದರಾಬಾದ್‌ಗೆ (₹2 ಕೋಟಿ)
ಸಂಬಂಧಿತ ಸುದ್ದಿಗಳು

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ 4 ರನ್ ಗಳ ರೋಚಕ ಗೆಲುವು
ನವದೆಹಲಿ : ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ 4 ರನ್ ಗಳ ರೋಚಕ ಗೆಲುವು ಸ…
◷ 07/11/2026
ಟೆಸ್ಟ್ ಕ್ರಿಕೆಟ್ಗೆ ಮಹಮ್ಮದ್ ಶಮಿ ವಿದಾಯ
ನವದೆಹಲಿ : ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಶುಕ…
◷ 07/11/2026
ಏಷ್ಯನ್ ಚಾಂಪಿಯನ್ಸ್ ಟ್ರೋಫಿ : ಜಪಾನ್ ವಿರುದ್ಧ 4-1 ಅಂತರದ ಭರ್ಜರಿ ಜಯ
ಮೊಹಾಲಿ: ಒಲಿಂಪಿಯನ್ ಬಲ್ಬೀರ್ ಸಿಂಗ್ ಸೀನಿಯರ್ ಇಂಟರ್ ನ್ಯಾಷನಲ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋ…
◷ 06/11/2026
ಮಹಿಳಾ ಪ್ರೀಮಿಯರ್ ಲೀಗ್ : ಹುಡುಗರೊಂದಿಗೆ ಆಡಿದ್ದ ಸಮೈರಾ ರಾಘವ್ ಈಗ ಡಬ್ಲ್ಯೂಪಿಎಲ್ನಲ್ಲಿ ಮಿಂಚಲು ಸಜ್ಜು!
ನವದೆಹಲಿ : ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯೂಪಿಎಲ್) ಗುಜರಾತ್ ಜೈಂಟ್ಸ್ ತಂಡವು 16 ವರ್ಷದ ಸಮೈರಾ ರಾಘವ್ ಅವರನ್ನು ಆಯ್ಕೆ ಮ…
◷ 05/11/2026
