ಸ್ಥಳೀಯ ಚಿತ್ರ ನಿರ್ಮಾಪಕರಿಗೆ ಜಾಗತಿಕ ಪ್ರೇಕ್ಷಕರನ್ನು ತಲುಪಲು IFFI ಸ್ಫೂರ್ತಿ ನೀಡುತ್ತದೆ : ನಿರ್ದೇಶಕ ಕಿಶೋರ್ ಅರ್ಜುನ್

ಪಣಜಿ : ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ತಮ್ಮ 'ದರ್ಯಾ' (Daryaa) ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗಿರುವ ಉತ್ತಮ ಪ್ರತಿಕ್ರಿಯೆಗೆ ನಿರ್ದೇಶಕ ಕಿಶೋರ್ ಅರ್ಜುನ್ ಸಂತಸ ವ್ಯಕ್ತಪಡಿಸಿದ್ದಾರೆ.ಚಿತ್ರದ ಕಥಾವಸ್ತುವಿನ ಕುರಿತು ಮಾತನಾಡಿದ ಅವರು, "ಸೆರೆಬ್ರಲ್ ಪಾಲ್ಸಿ (ಮಸ್ತಿಷ್ಕ ಪಾರ್ಶ್ವವಾಯು) ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಬಾಲಕನೊಬ್ಬ ದೊಡ್ಡ ಕನಸುಗಳನ್ನು ಕಾಣುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನಡೆಸುವ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದನ್ನು ಕೇವಲ ಒಂದು ದುಃಖದ ಕಥೆಯಾಗಿ ತೋರಿಸದೆ, ಅತ್ಯಂತ ಸಕಾರಾತ್ಮಕ ಹಾಗೂ ಆಶಾದಾಯಕ ದೃಷ್ಟಿಕೋನದಲ್ಲಿ ಕಟ್ಟಿಕೊಡಲಾಗಿದೆ" ಎಂದು ತಿಳಿಸಿದರು.ವೃತ್ತಿಯಲ್ಲಿ ಪತ್ರಕರ್ತರಾಗಿರುವ ಕಿಶೋರ್ ಅರ್ಜುನ್, ಗೋವಾದಲ್ಲಿ ಇಫ್ಫಿ (IFFI) ಆರಂಭವಾದ ನಂತರವೇ ತಮಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಮತ್ತು ಸ್ಫೂರ್ತಿ ಮೂಡಿತು ಎಂದು ಸ್ಮರಿಸಿಕೊಂಡರು."ಚಿತ್ರೋತ್ಸವಕ್ಕೆ ವಿಶ್ವದ ಮೂಲೆಮೂಲೆಗಳಿಂದ ಸಿನಿಪ್ರಿಯರು ಆಗಮಿಸುವುದರಿಂದ, ಸ್ಥಳೀಯ ಚಿತ್ರ ನಿರ್ಮಾಪಕರಿಗೆ ತಮ್ಮ ಹಳ್ಳಿ ಹಾಗೂ ತಮ್ಮದೇ ಭಾಷೆಯ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಲು ದೊಡ್ಡ ಮಟ್ಟದ ಪ್ರೇರಣೆ ಸಿಗುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟರು.
ಸಂಬಂಧಿತ ಸುದ್ದಿಗಳು

ಮತ್ತೆ ನಿರ್ದೇಶನದತ್ತ ಮುಖ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ!
ಬೆಂಗಳೂರು: ‘ಯುಐ’ ಸಿನಿಮಾದ ಬಳಿಕ ಕೇವಲ ನಟನೆಯಲ್ಲಿ ಬ್ಯುಸಿಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ, ಮತ್ತೆ ನಿರ್ದೇಶಕನ ಕ್ಯಾಪ್ ತೊಡಲು ಸ…
◷ 25/11/2026
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ ದರ್ಶನ್!
ಬೆಂಗಳೂರು : ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧೀಸಿದಂತೆ ಜೈಲಿನಲ್ಲಿದ್ದು, ಇದೀಗ ವಿಶೇಷ ಸೌಲಭ್ಯವಿರುವ ಖಾಸಗಿ ಆಸ…
◷ 23/11/2026
57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಭವ್ಯ ಚಾಲನೆ
ಪಣಜಿ : ಗೋವಾದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ 57ನೇ ಭಾರತೀಯ ಅಂತರರಾಷ್ಟ…
◷ 21/11/2026
IFFI 2026: ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಗೆ 5 ವಿಶಿಷ್ಟ ಸರಣಿಗಳು ನಾಮನಿರ್ದೇಶನ
ಪಣಜಿ : ಭಾರತದ ಡಿಜಿಟಲ್ ಮನರಂಜನಾ ಉದ್ಯಮದ ಬದಲಾಗುತ್ತಿರುವ ಚಿತ್ರಣವು 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಪ್ರ…
◷ 18/11/2026
