ಮತ್ತೆ ಒಂದಾದ ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಜೋಡಿ : ಎಸ್. ನಾರಾಯಣ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿ ಶ್ರುತಿ!

ಬೆಂಗಳೂರು: ಕನ್ನಡ ಚಿತ್ರರಂಗದ 'ಕಲಾಸಾಮ್ರಾಟ್' ಖ್ಯಾತಿಯ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ಮುಂದಿನ ಸಿನಿಮಾದ ಕುರಿತು ಚಿತ್ರತಂಡದಿಂದ ಬಹುದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಈ ನೂತನ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಹಿರಿಯ ನಟಿ ಶ್ರುತಿ ಅವರು ಎಂಟ್ರಿ ಕೊಟ್ಟಿದ್ದು, ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕ-ನಟಿಯ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ನೆರವೇರಿತ್ತು. ಇದೀಗ ಚಿತ್ರತಂಡ ಶ್ರುತಿ ಅವರ ಸೇರ್ಪಡೆಯನ್ನು ಅಧಿಕೃತಗೊಳಿಸುವ ಮೂಲಕ ಸಿನಿಪ್ರಿಯರಲ್ಲಿ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಹಳೆಯ ಮ್ಯಾಜಿಕ್ ಮರುಕಳಿಸುವ ನಿರೀಕ್ಷೆ
ಎಸ್. ನಾರಾಯಣ್ ಮತ್ತು ಶ್ರುತಿ ಕಾಂಬಿನೇಷನ್ ಎಂದರೆ ಕನ್ನಡ ಪ್ರೇಕ್ಷಕರಿಗೆ ಮೊದಲಿನಿಂದಲೂ ವಿಶೇಷ ಕ್ರೇಜ್ ಇದೆ. ಈ ಹಿಂದೆ ಇವರಿಬ್ಬರ ಜೋಡಿಯಲ್ಲಿ ಮೂಡಿಬಂದಿದ್ದ ‘ಭಾಮಾ ಸತ್ಯಭಾಮಾ’, ‘ತವರಿನ ತೊಟ್ಟಿಲು’, ‘ವೀರಪ್ಪನಾಯಕ’ ಹಾಗೂ ‘ಸಿರಿವಂತ’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗುವುದರ ಜೊತೆಗೆ ಕೌಟುಂಬಿಕ ಪ್ರೇಕ್ಷಕರ ಮನಗೆದ್ದಿದ್ದವು. ಇದೀಗ ದೀರ್ಘಾವಧಿಯ ನಂತರ ಈ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಆದರೆ, ಚಿತ್ರದಲ್ಲಿ ಶ್ರುತಿ ಅವರ ಪಾತ್ರ ಹೇಗಿರಲಿದೆ ಎಂಬ ಗುಟ್ಟನ್ನು ಚಿತ್ರತಂಡ ಸದ್ಯಕ್ಕೆ ರಟ್ಟು ಮಾಡಿಲ್ಲ.
ಮೊದಲ ಬಾರಿಗೆ ಹರಿಕೃಷ್ಣ-ನಾರಾಯಣ್ ಜುಗಲ್‌ಬಂದಿ
ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಸೇರ್ಪಡೆ. ಎಸ್. ನಾರಾಯಣ್ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಈಗಾಗಲೇ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೇಲೆ ಸಿನಿಪ್ರಿಯರಲ್ಲಿ ನಿರೀಕ್ಷೆ ಗರಿಗೆದರಿದೆ. ನಿರ್ಮಾಪಕರು, ನಿರ್ಮಾಣ ಸಂಸ್ಥೆ ಹಾಗೂ ಉಳಿದ ತಾರಾಬಳಗದ ವಿವರಗಳನ್ನು ಚಿತ್ರತಂಡ ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದೆ. ಒಟ್ಟಿನಲ್ಲಿ ಎಸ್. ನಾರಾಯಣ್ ಅವರ ಅನುಭವಿ ನಿರ್ದೇಶನ, ಶ್ರುತಿ ಅವರ ನೈಜ ಅಭಿನಯ ಮತ್ತು ಹರಿಕೃಷ್ಣ ಅವರ ಸಂಗೀತದ ಮೆರುಗಿನೊಂದಿಗೆ ಮತ್ತೊಂದು ಸದಭಿರುಚಿಯ ಕೌಟುಂಬಿಕ ಚಿತ್ರ ಕನ್ನಡ ಪ್ರೇಕ್ಷಕರ ಮುಂದೆ ಬರುವುದು ಖಚಿತವಾಗಿದೆ
ಸಂಬಂಧಿತ ಸುದ್ದಿಗಳು

ಮತ್ತೆ ನಿರ್ದೇಶನದತ್ತ ಮುಖ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ!
ಬೆಂಗಳೂರು: ‘ಯುಐ’ ಸಿನಿಮಾದ ಬಳಿಕ ಕೇವಲ ನಟನೆಯಲ್ಲಿ ಬ್ಯುಸಿಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ, ಮತ್ತೆ ನಿರ್ದೇಶಕನ ಕ್ಯಾಪ್ ತೊಡಲು ಸ…
◷ 25/11/2026
ಸ್ಥಳೀಯ ಚಿತ್ರ ನಿರ್ಮಾಪಕರಿಗೆ ಜಾಗತಿಕ ಪ್ರೇಕ್ಷಕರನ್ನು ತಲುಪಲು IFFI ಸ್ಫೂರ್ತಿ ನೀಡುತ್ತದೆ : ನಿರ್ದೇಶಕ ಕಿಶೋರ್ ಅರ್ಜುನ್
ಪಣಜಿ : ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ತಮ್ಮ 'ದರ್ಯಾ' (Daryaa) ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗಿರ…
◷ 24/11/2026
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ ದರ್ಶನ್!
ಬೆಂಗಳೂರು : ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧೀಸಿದಂತೆ ಜೈಲಿನಲ್ಲಿದ್ದು, ಇದೀಗ ವಿಶೇಷ ಸೌಲಭ್ಯವಿರುವ ಖಾಸಗಿ ಆಸ…
◷ 23/11/2026
57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಭವ್ಯ ಚಾಲನೆ
ಪಣಜಿ : ಗೋವಾದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ 57ನೇ ಭಾರತೀಯ ಅಂತರರಾಷ್ಟ…
◷ 21/11/2026
