ಮಹದೇವಪ್ಪನ ಬಗ್ಗೆ ಯಾಕ್ರಿ ಕೇಳ್ತೀರಾ : ಮಾಧ್ಯಮದ ಪ್ರಶ್ನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ

ಮೈಸೂರು : ಮಹದೇವಪ್ಪನ ಬಗ್ಗೆ ಯಾಕ್ರಿ ಕೇಳ್ತೀರಾ,ಮಹದೇವಪ್ಪನು ಬರ್ತಾರೆ. ಮಹದೇವಪ್ಪ ನಮ್ಮ ಪಾರ್ಟಿಯಲ್ಲಿಲ್ವಾ, ಮತ್ತೆ ಅವರು ಬಂದೇ ಬರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ಮೈಸೂರಿನಲ್ಲಿ ಮಾತನಾಡಿದ ಅವರು ಮಹದೇವಪ್ಪ ಪ್ರತ್ಯೇಕವಾಗಿ ಸಮಾವೇಶ ಮಾಡುತ್ತಿಲ್ಲ, ಡಿಎಸ್ ಎಸ್ ಸಂಘಟನೆಗಳು ಸಮಾವೇಶ ಮಾಡುತ್ತಿರುವುದು.ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದಾರೆ.ಕಾಂಗ್ರೆಸ್ ಪಕ್ಷವನ್ನು ಡಿವೈಡ್ ಮಾಡಬೇಕಾದ ಪ್ರಶ್ನೆಗಳನ್ನು ಕೇಳುತ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಗರಂ ಆದರು. ಅವರು ಬರ್ತಾರಾ ಎಂದು ಪ್ರಶ್ನೆ ಕೇಳ್ತೀರಾ, ಅವರು ನಮ್ಮ ಪಕ್ಷದ ಶಾಸಕರಲ್ವಾ. ಟಿ.ನರಸೀಪುರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದಾರೆ ಮಹದೇವಪ್ಪ.ಮಹದೇವಪ್ಪನು ಬರ್ತಾರೆ ಅವರ ಮಗ ಸಂಸದ ಸುನೀಲ್ ಬೋಸ್ ಸಹ ಬರ್ತಾರೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಡಾ.ಎಚ್‌ಸಿ ಮಹದೇವಪ್ಪ ಭೇಟಿ
ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಡಾ.ಎಚ್‌ಸಿ ಮಹದೇವಪ್ಪ ಭೇಟಿ ನೀಡಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಡಾ.ಎಚ್.ಸಿ ಮಹದೇವಪ್ಪ ಭೇಟಿ ನೀಡಿದರು. ಡಾ.ಎಚ್.ಸಿ ಮಹದೇವಪ್ಪ ಕಳೆದ ನಾಲ್ಕು ತಿಂಗಳಿನಿಂದ ಸಿದ್ದರಾಮಯ್ಯ ಜೊತೆ ಅಂತರ ಕಾಯ್ದುಕೊಂಡಿದ್ದರು.ನಾಳಿನ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಸಂಜೆಯೇ ಮೈಸೂರಿಗೆ ಮಾಜಿ ಸಿಎಂ ಆಗಮಿಸಿದ್ದಾರೆ. ಸಿದ್ದರಾಮಯ್ಯ ಭೇಟಿಯಾಗಿ ಮಾತುಕತೆ ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾತುಕತೆ ನಡೆಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ನಡೆಸಿದ ಸಂಧಾನ ಬಹುತೇಕ ಸಕ್ಸಸ್ ಆಗಿದೆ.
ಸಂಬಂಧಿತ ಸುದ್ದಿಗಳು

ಕೆ.ಆರ್. ನಗರ ತಾಲೂಕು ಪಂಚಾಯಿತಿಯ ನೂತನ ಇಓ ಆಗಿ ಕೆ.ಜೆ. ಮಲ್ಲಿಕಾರ್ಜುನ್ ಅಧಿಕಾರ ಸ್ವೀಕಾರ!
ವರದಿ: ವಿನಯ್ ದೊಡ್ಡಕೊಪ್ಪಲು ಕೆ ಆರ್ ನಗರ : ಕೆ ಆರ್ ನಗರ ತಾಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿ(ಇಓ) ಆಗಿ ಕೆ.ಜೆ.ಮಲ್ಲಿ…
◷ 25/11/2026
ನಾನು ಸಿದ್ದರಾಮಯ್ಯ ಯಾವತ್ತೂ ಜಗಳವೇ ಆಡಿಲ್ಲ, ಮುನಿಸೆಲ್ಲಿಂದ ಬಂತು : ಡಾ.ಎಚ್.ಸಿ ಮಹದೇವಪ್ಪ ಸ್ಪಷ್ಟನೆ
ಮೈಸೂರು :ನಾನು ಸಿದ್ದರಾಮಯ್ಯ ಯಾವತ್ತೂ ಜಗಳವೇ ಆಡಿಲ್ಲ.ಜಗಳ ಆಡಿಲ್ಲದ ಮೇಲೆ ಅಂತರ, ಮುನಿಸು ಎಲ್ಲಿಂದ ಬಂತು ಎಂದು ಮಾಜಿ ಸಚಿವ ಡಾ.ಎಚ…
◷ 25/11/2026
ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (CIE) ಉತ್ಪಾದನೆಗೆ ₹11,000 ಕೋಟಿ ಯೋಜನೆ : ಕೇಂದ್ರ ಸಚಿವ ಸಂಪುಟ ಅಸ್ತು
ನವದೆಹಲಿ : ಭಾರತದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉದ್ಯಮದ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಪ್ರಧಾನಮಂತ್ರಿ…
◷ 25/11/2026
ಮಂಗಳೂರಿನಲ್ಲಿ ದೇಶದ ಮೊದಲ 'ಸಸ್ಟೈನಬಲ್ ಡೇಟಾ ಸೆಂಟರ್' ಸ್ಥಾಪನೆಗೆ ಸಿದ್ಧತೆ : ತಣ್ಣೀರುಬಾವಿ ಜಾಗ ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ದೇಶದ ಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ (Sustainable Data Center) ಸ್ಥಾಪಿಸಲು ರಾಜ್ಯ ಸರ್…
◷ 25/11/2026
