ವರದಿ: ವಿನಯ್ ದೊಡ್ಡಕೊಪ್ಪಲು ಕೆ ಆರ್ ನಗರ : ಕೆ ಆರ್ ನಗರ ತಾಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿ(ಇಓ) ಆಗಿ ಕೆ.ಜೆ.ಮಲ್ಲಿಕಾರ್ಜುನ್ ಅವರು ಅಧಿಕಾರಿ ಸ್ವೀಕರಿಸಿದರು.  ಹಾಲಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವಿ.ಪಿ.ಕುಲದೀಪ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಕೆ.ಜೆ.ಮಲ್ಲಿಕಾರ್ಜುನ್ ಅವರು ಕೆ ಆರ್ ನಗರ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ಕೆಲ ತಿಂಗಳ ಹಿಂದಷ್ಟೆ ವರ್ಗಾವಣೆಗೊಂಡು ಸ್ಥಳ ನಿಯೋಜನೆಯಲ್ಲಿ ಇದ್ದರು.  ಸೋಮವಾರ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ್ ಶಾಸಕ ಡಿ.ರವಿಶಂಕರ್ ಅವರ ಸಹಕಾರ ದೊಂದಿಗೆ ತಾ.ಪಂ.ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು. ನಂತರ ಸಾಲಿಗ್ರಾಮ ತಾಲೂಕಿನ ಯುವ ಕಾಂಗ್ರೇಸ್ ಮುಖಂಡ ಚಿಕ್ಕಕೊಪ್ಪಲು ಸಿ.ಎಸ್.ಗಿರೀಶ್, ಗುತ್ತಿಗೆದಾರ ಕೆಗ್ಗರೆ ಸುನೀಲ್,  ಪತ್ರಕರ್ತ ಜಿಟೆಕ್ ಶಂಕರ್ ಮತ್ತಿತರರು ನೂತನ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ್ ಅವರನ್ನ ಅಭಿನಂಧಿಸಿದರು.