ಮೈಸೂರು :ನಾನು ಸಿದ್ದರಾಮಯ್ಯ ಯಾವತ್ತೂ ಜಗಳವೇ ಆಡಿಲ್ಲ.ಜಗಳ ಆಡಿಲ್ಲದ ಮೇಲೆ ಅಂತರ, ಮುನಿಸು ಎಲ್ಲಿಂದ ಬಂತು‌ ಎಂದು ಮಾಜಿ ಸಚಿವ  ಡಾ.ಎಚ್.ಸಿ ಮಹದೇವಪ್ಪ ಸ್ಪಷ್ಟಪಡಿಸಿದರು.ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಅವರು ಸಿದ್ದರಾಮಯ್ಯ ಮನೆಗೆ ನಾನು ಬರುವುದು ಯಾವುದು ಹೊಸದಲ್ಲ.ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯಗಳು ಇಲ್ಲ.ಎಲ್ಲವೂ ಊಹಾಪೋಹಗಳು ನಡೆಯುತ್ತಿದ್ದವು. ಜಗಳ ಆಡಿಲ್ಲದೆ ಮೇಲೆ ಒಂದಾಗುವ ಪ್ರಶ್ನೆ ಎಲ್ಲಿಂದ ಬರುತ್ತದೆ.ನಮ್ಮದು 40 ವರ್ಷದ ಸ್ನೇಹ.ಅದು ಅಷ್ಟು ಬೇಗ ಬಿರುಕು ಬಿಡುವುದಿಲ್ಲ.ಸಂವಿಧಾನ ದಿನಾ ವಿಚಾರದಲ್ಲಿ ಯಾವ ಗೊಂದಲಗಳು ಕೂಡ ಇಲ್ಲ ಎಂದು ತಿಳಿಸಿದರು.ಸಿದ್ದರಾಮಯ್ಯ ಮಹದೇವಪ್ಪ ಭೇಟಿ ಬಳಿಕ ಕೈ ಹಿಡಿದು ಥ್ಯಾಂಕ್ಸ್ ಕೊಡುವಂತೆ ಮಹದೇವಪ್ಪ‌ಗೆ  ಸಚಿವ ಜಮೀರ್‌ ಹೇಳಿದರು. ನಮ್ಮಲ್ಲಿ ಆ ತರಹದ ಯಾವ ಫಾರ್ಮಲಿಟಿಸ್ ಇಲ್ಲ.ನಾವು ಯಾವತ್ತು ಫಾರ್ಮಲಿಟಿಸ್ ಮಾಡಿಕೊಂಡೇ ಇಲ್ಲ ಎಂದು ಮಹದೇವಪ್ಪ ತಿಳಿಸಿದರು. ಮಹದೇವಪ್ಪ‌ ಆಪ್ತ ಸಹಾಯಕನ ಬಗ್ಗೆ ಸಿದ್ದರಾಮಯ್ಯ ಹಾಸ್ಯ ಮಾಡಿದರು. ಇವನು ನಮ್ಮ ಕ್ಷೇತ್ರದವನು.ಆದರೆ ಇರೋದು ಮಾತ್ರ ಮಹದೇವಪ್ಪನ ಜೊತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನಕ್ಕರು.