ಹಿರಿಯೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ನೇರ ಹೋರಾಟದ ಕ್ಷೇತ್ರ : ಸಚಿವ ಹೆಚ್.ಡಿ. ಕುಮಾರಸ್ವಾಮಿ

ಉಡುಪಿ : ಬಿಜೆಪಿ ಅಭ್ಯರ್ಥಿಗಳು ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಸೆ ಬಿಜೆಪಿಯದ್ದಾಗಿದ್ದರೂ, ಹಿಂದಿನಿಂದಲೂ ಅದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ನೇರ ಹೋರಾಟದ ಕ್ಷೇತ್ರವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಸೋಮವಾರ ಕೊಲ್ಲೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್‌ನ 40,000 ಮತಗಳಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜಯಗಳಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಬಿಜೆಪಿಯವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು. ಈ ವಿಚಾರದಲ್ಲಿ ತಮಗೆ ಯಾವುದೇ ವೈಯಕ್ತಿಕ ಪ್ರತಿಷ್ಠೆಯಾಗಲಿ ಅಥವಾ ಗೊಂದಲವಾಗಲಿ ಇಲ್ಲ, ನಾವು ತಾಳ್ಮೆಯಿಂದ ಇದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಸರ್ಕಾರ ಮೂರುವರೆ ವರ್ಷ ಪೂರೈಸಿದ್ದರೂ ಸಾಧನೆಗಳನ್ನು ಚರ್ಚಿಸಲು ಯಾವುದೇ ವಿಚಾರಗಳಿಲ್ಲ ಎಂದು ಟೀಕಿಸಿದರು. ನುಡಿದಂತೆ ನಡೆದಿದ್ದೇವೆ ಎಂದು 5 ಗ್ಯಾರಂಟಿಗಳನ್ನು ನೀಡಿರುವ ಸರ್ಕಾರ, ಅದರ ಹೊರೆಯನ್ನು ಜನರ ಮೇಲೆಯೇ ಹಾಕುತ್ತಿದೆ. ಜನರ ದುಡಿಮೆಯ ತೆರಿಗೆ ಹಣದಿಂದ ಖಜಾನೆ ತುಂಬುತ್ತಿದೆಯೇ ಹೊರತು, ಇದರಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳ ಕೊಡುಗೆ ಏನೂ ಇಲ್ಲ ಎಂದು ಅವರು ಆರೋಪಿಸಿದರು. 2025ರಲ್ಲಿ ಬಸ್ ದರವನ್ನು ಶೇ. 35 ರಷ್ಟು ಏರಿಸಿದ್ದ ಸರ್ಕಾರ, ಈಗ ಶೇ. 45 ರಷ್ಟು ಹೆಚ್ಚಿಸಿದೆ. ಅಲ್ಲದೆ ಅಬಕಾರಿ ಇಲಾಖೆಯಿಂದ 40 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, ಹಲವು ಕ್ಷೇತ್ರಗಳ ತೆರಿಗೆ ಹೆಚ್ಚಿಸಿ ಜನರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು. ಗ್ಯಾರಂಟಿಗಳಿಗೆ ತಮ್ಮ ವಿರೋಧವಿಲ್ಲ, ಆದರೆ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿ ಜನರ ಬದುಕನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ ಎಂದು ಪ್ರಶ್ನಿಸಿದರು. ಕಬ್ಬು ಬೆಳೆಗಾರರ ಹೋರಾಟದ ಬಳಿಕವೂ ಸರ್ಕಾರ ನೆರವಿಗೆ ಬಂದಿಲ್ಲ ಹಾಗೂ ಸರಿಯಾದ ನೀರು ಹಂಚಿಕೆಯಾಗದೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾರತ್ ಜೋಡೋ ವಿಚಾರದಲ್ಲಿರುವ ಕಾಳಜಿ ಸರ್ಕಾರಕ್ಕೆ ರೈತರ ಮೇಲಿಲ್ಲ ಎಂದ ಅವರು, ಬರಗಾಲ ಮತ್ತು ಬಿತ್ತನೆ ಬೀಜದ ಸಮಸ್ಯೆಯಿಂದ ರಾಜ್ಯಕ್ಕೆ 62 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ಈ ಹಣವನ್ನು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ ಎಂದರು. ಹಾಸನಾಂಬೆ ದೇಗುಲದ ಮೂಲಕ 29 ಕೋಟಿ ರೂಪಾಯಿ ಸಂಗ್ರಹವಾಗಿರುವ ವಿಚಾರವನ್ನೂ ಅವರು ಪ್ರಸ್ತಾಪಿಸಿದರು. ಕರಾವಳಿ ಭಾಗವು ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳ ಸಂಗಮವಾಗಿದೆ ಎಂದ ಕುಮಾರಸ್ವಾಮಿ, ಕರಾವಳಿಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ 35 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿ 2-3 ತಿಂಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲ ಎಂದು ಪ್ರಶ್ನಿಸಿದರು.ಕೇವಲ ಘೋಷಣೆಗಳ ಮೂಲಕ ಕರಾವಳಿ ಜನತೆಯನ್ನು ತೃಪ್ತಿಪಡಿಸಲು ಮುಂದಾದರೆ ಕಾಂಗ್ರೆಸ್ ಪ್ರಾಯಶ್ಚಿತ್ತಕ್ಕೆ ಸಿದ್ಧವಾಗಿರಬೇಕು ಎಂದು ಎಚ್ಚರಿಸಿದ ಅವರು ಕುಮಾರಸ್ವಾಮಿಗೆ ಹೊಟ್ಟೆ ಉರಿ ಹಾಗೂ ಸುಳ್ಳೆ ಮನೆ ದೇವರು ಎಂದು ಕಾಂಗ್ರೆಸ್ ಟೀಕಿಸುತ್ತಾ ಬಂದಿದೆ, ಆದರೆ ನಿಜವಾಗಿ ಸುಳ್ಳು ಮತ್ತು ಮೋಸವನ್ನು ರಾಜ್ಯ ಸರ್ಕಾರವೇ ಜನತೆಗೆ ಮಾಡುತ್ತಿದೆ ಎಂದು ತಿರುಗೇಟು ನೀಡಿದರು. ತಮ್ಮ ಕುಟುಂಬ ದೇವರನ್ನೇ ನಂಬಿಕೊಂಡಿರುವ ಕುಟುಂಬವಾಗಿದ್ದು, ನಾಡಿಗೆ ಬಂದಿರುವ ಸಂಕಷ್ಟ ಮತ್ತು ಬರಗಾಲ ಪರಿಹರಿಸುವಂತೆ ಪ್ರಾರ್ಥಿಸಿ ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಸಂಬಂಧಿತ ಸುದ್ದಿಗಳು

ಪಂಜಾಬ್ ಚುನಾವಣೆಗೂ ಮುನ್ನ ಅಕಾಲಿದಳ - ಬಿಜೆಪಿ ಮೈತ್ರಿ ; ಸುಖ್ಬೀರ್ ಬಾದಲ್ ಸಮ್ಮುಖದಲ್ಲಿ ಅಮಿತ್ ಶಾ ಘೋಷಣೆ
ನವದೆಹಲಿ : 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಶಿರೋಮಣಿ ಅಕಾಲಿದಳ (ಎಸ್ಎಡಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತ…
◷ 24/11/2026
ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಓದೋದಿಲ್ಲ, ಓದಲು ಬೇರೆ ಪುಸ್ತಕಗಳಿವೆ : ಸಂಸದ ಯದುವೀರ್ ಹೇಳಿಕೆ
ಮೈಸೂರು : ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ವ…
◷ 17/11/2026
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ : ಪ್ರಿಯಾಂಕ್ ಖರ್ಗೆ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ಕರ್ನಾಟಕದ ಗೃಹ ಸಚಿವರಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ್…
◷ 11/11/2026
ದೀಪಾವಳಿ ಹಬ್ಬವನ್ನು 'ಖುಷಿಯ ಈದ್ ಎಂದ ಮಲ್ಲಿಕಾರ್ಜುನ ಖರ್ಗೆ : ಬಿಜೆಪಿ ಆಕ್ರೋಶ
ನವದೆಹಲಿ: ದೀಪಾವಳಿ ಹಬ್ಬವನ್ನು 'ಖುಷಿಯ ಈದ್ (ಖುಷಿಗಳ ಹಬ್ಬ) ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಣ್ಣಿಸಿರುವುದಕ್…
◷ 09/11/2026
