ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಓದೋದಿಲ್ಲ, ಓದಲು ಬೇರೆ ಪುಸ್ತಕಗಳಿವೆ : ಸಂಸದ ಯದುವೀರ್ ಹೇಳಿಕೆ

ಮೈಸೂರು : ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ವಿಚಾರಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು ಸಮರ್ಥ ಗುಣ ಇರುವವರು ಆ ಸ್ಥಾನವನ್ನು ನಿಭಾಯಿಸುತ್ತಾರೆ. ಈ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೇ ಅಧ್ಯಕ್ಷರಾದರೂ ಪಕ್ಷವನ್ನು ಬಲವರ್ಧನೆ ಮಾಡಬೇಕು. ಈಗಿರುವವರು ಮುಂದುವರೆದರೂ ಸಂತೋಷ. ಬೇರೆಯವರು ಆದರೂ ಸಂತೋಷವೆ. ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆಗೆ ಮುಂದಾಗಬೇಕು. ನಾವು ನಮ್ಮ ಇತಿಮಿತಿಯಲ್ಲಿ ಪಕ್ಷ ಕಟ್ಟುತ್ತಿದ್ದೇವೆ. ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಬಾರಿ ಬಿಜೆಪಿ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದರು.ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನಾನು ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಓದೋದಿಲ್ಲ. ನನಗೆ ಓದಲು ಬೇರೆ ಪುಸ್ತಕಗಳಿವೆ. ಅದರಲ್ಲಿ ಅರ್ಧ ಸತ್ಯ ಅರ್ಧ ಸುಳ್ಳುಗಳಿರುತ್ತವೆ. ಕಾಂಗ್ರೆಸ್ ಇತಿಹಾಸವೇ ಅದು. ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಪುಸ್ತಕ, ಕಾಂಗ್ರೆಸ್ ಪೇಪರ್ ಓದುವುದನ್ನು ಬಿಟ್ಟು ನ್ಯೂಸ್ ಚಾನಲ್‌ಗಳನ್ನು ನೋಡಲಿ. ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಗೊತ್ತಾಗುತ್ತದೆ ಎಂದರು.
ಸಂಬಂಧಿತ ಸುದ್ದಿಗಳು

ಪಂಜಾಬ್ ಚುನಾವಣೆಗೂ ಮುನ್ನ ಅಕಾಲಿದಳ - ಬಿಜೆಪಿ ಮೈತ್ರಿ ; ಸುಖ್ಬೀರ್ ಬಾದಲ್ ಸಮ್ಮುಖದಲ್ಲಿ ಅಮಿತ್ ಶಾ ಘೋಷಣೆ
ನವದೆಹಲಿ : 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಶಿರೋಮಣಿ ಅಕಾಲಿದಳ (ಎಸ್ಎಡಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತ…
◷ 24/11/2026
ಹಿರಿಯೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ನೇರ ಹೋರಾಟದ ಕ್ಷೇತ್ರ : ಸಚಿವ ಹೆಚ್.ಡಿ. ಕುಮಾರಸ್ವಾಮಿ
ಉಡುಪಿ : ಬಿಜೆಪಿ ಅಭ್ಯರ್ಥಿಗಳು ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಸೆ ಬಿಜೆಪಿಯದ್ದಾಗಿದ್ದರೂ, ಹಿ…
◷ 16/11/2026
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ : ಪ್ರಿಯಾಂಕ್ ಖರ್ಗೆ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ಕರ್ನಾಟಕದ ಗೃಹ ಸಚಿವರಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ್…
◷ 11/11/2026
ದೀಪಾವಳಿ ಹಬ್ಬವನ್ನು 'ಖುಷಿಯ ಈದ್ ಎಂದ ಮಲ್ಲಿಕಾರ್ಜುನ ಖರ್ಗೆ : ಬಿಜೆಪಿ ಆಕ್ರೋಶ
ನವದೆಹಲಿ: ದೀಪಾವಳಿ ಹಬ್ಬವನ್ನು 'ಖುಷಿಯ ಈದ್ (ಖುಷಿಗಳ ಹಬ್ಬ) ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಣ್ಣಿಸಿರುವುದಕ್…
◷ 09/11/2026
