ಮಹಿಳಾ ಮೀಸಲಾತಿ ಹಾದಿಯ ಅಡೆತಡೆಗಳನ್ನು ನಿವಾರಿಸಿಯೇ ಸಿದ್ಧ : ಪ್ರಧಾನಿ ಮೋದಿ

ನವದೆಹಲಿ : ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲು ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, 'ನಾರಿ ಶಕ್ತಿ'ಗೆ ನೀಡಿದ ಭರವಸೆಯನ್ನು ಈಡೇರಿಸಲು ತಾವು ಬದ್ಧರಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. "ನಮ್ಮ ಉತ್ಸಾಹವೂ ಉನ್ನತವಾಗಿದೆ, ನಮ್ಮ ಧೈರ್ಯವೂ ಅಚಲವಾಗಿದೆ ಮತ್ತು ನಮ್ಮ ನಿರ್ಧಾರವೂ ದೃಢವಾಗಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶನಿವಾರ ಮಧ್ಯಾಹ್ನ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನಾವು ನಮ್ಮ 'ನಾರಿ ಶಕ್ತಿ'ಗೆ ಒಂದು ಭರವಸೆಯನ್ನು ನೀಡಿದ್ದೆವು ಮತ್ತು ಅದನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಮಹಿಳಾ ಮೀಸಲಾತಿ ಕುರಿತ ತಮ್ಮ ಹಳೆಯ ವಿಡಿಯೋ ಸಂದೇಶವೊಂದನ್ನು ಕೂಡ ಅವರು ಹಂಚಿಕೊಂಡಿದ್ದಾರೆ.ಆ ವಿಡಿಯೋ ಸಂದೇಶದಲ್ಲಿ ಮೋದಿ, "ನಾರಿ ಶಕ್ತಿಗೆ ರಾಜಕೀಯ ಪಾಲುದಾರಿಕೆ ಒದಗಿಸುವ ಹೋರಾಟ ದಶಕಗಳಿಂದ ನಡೆಯುತ್ತಿದೆ. ಹಲವು ವರ್ಷಗಳಿಂದ ನಾನೂ ಸಹ ಇದಕ್ಕಾಗಿ ಪ್ರಯತ್ನಿಸುತ್ತಿರುವವರಲ್ಲಿ ಒಬ್ಬನಾಗಿದ್ದೇನೆ. ಎಷ್ಟೋ ಮಹಿಳೆಯರು ನನ್ನ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಮತ್ತು ಹಲವು ಸಹೋದರಿಯರು ಪತ್ರಗಳ ಮೂಲಕ ತಮ್ಮ ಭಾವನೆಗಳನ್ನು ತಿಳಿಸಿದ್ದಾರೆ" ಎಂದಿದ್ದಾರೆ."ದೇಶದ ಶೇ. 100ರಷ್ಟು ನಾರಿ ಶಕ್ತಿಯ ಆಶೀರ್ವಾದ ನಮ್ಮೊಂದಿಗಿದೆ ಎಂಬುದು ನನಗೆ ತಿಳಿದಿದೆ. ಮಹಿಳಾ ಮೀಸಲಾತಿಯ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ಅಡೆತಡೆಯನ್ನು ನಾವು ನಿವಾರಿಸಿಯೇ ತೀರುತ್ತೇವೆ ಎಂದು ದೇಶದ ಪ್ರತಿಯೊಬ್ಬ ಮಹಿಳೆಗೂ ನಾನು ಭರವಸೆ ನೀಡುತ್ತೇನೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಪಕ್ಷಗಳು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಪಾಲುದಾರಿಕೆಯನ್ನು ಹೆಚ್ಚಿಸುವುದನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ. ಅದಕ್ಕೆ ಕೇವಲ ಸಮಯದ ನಿರೀಕ್ಷೆಯಷ್ಟೇ ಬಾಕಿಯಿದೆ" ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.
ಸಂಬಂಧಿತ ಸುದ್ದಿಗಳು

ಪಂಜಾಬ್ ಚುನಾವಣೆಗೂ ಮುನ್ನ ಅಕಾಲಿದಳ - ಬಿಜೆಪಿ ಮೈತ್ರಿ ; ಸುಖ್ಬೀರ್ ಬಾದಲ್ ಸಮ್ಮುಖದಲ್ಲಿ ಅಮಿತ್ ಶಾ ಘೋಷಣೆ
ನವದೆಹಲಿ : 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಶಿರೋಮಣಿ ಅಕಾಲಿದಳ (ಎಸ್ಎಡಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತ…
◷ 24/11/2026
ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಓದೋದಿಲ್ಲ, ಓದಲು ಬೇರೆ ಪುಸ್ತಕಗಳಿವೆ : ಸಂಸದ ಯದುವೀರ್ ಹೇಳಿಕೆ
ಮೈಸೂರು : ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ವ…
◷ 17/11/2026
ಹಿರಿಯೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ನೇರ ಹೋರಾಟದ ಕ್ಷೇತ್ರ : ಸಚಿವ ಹೆಚ್.ಡಿ. ಕುಮಾರಸ್ವಾಮಿ
ಉಡುಪಿ : ಬಿಜೆಪಿ ಅಭ್ಯರ್ಥಿಗಳು ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಸೆ ಬಿಜೆಪಿಯದ್ದಾಗಿದ್ದರೂ, ಹಿ…
◷ 16/11/2026
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ : ಪ್ರಿಯಾಂಕ್ ಖರ್ಗೆ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ಕರ್ನಾಟಕದ ಗೃಹ ಸಚಿವರಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ್…
◷ 11/11/2026
