ಸೆಮಿಕಂಡಕ್ಟರ್ ವಲಯಕ್ಕೆ ಮತ್ತಷ್ಟು ಬಲ : ಕರ್ನಾಟಕದಲ್ಲಿ ₹500 ಕೋಟಿಗೂ ಅಧಿಕ ಹೂಡಿಕೆಗೆ ಲಿಂಡೆ ಆಸಕ್ತಿ!

ಬೆಂಗಳೂರು: ಜಾಗತಿಕ ಸುಧಾರಿತ ವಸ್ತುಗಳ ತಯಾರಿಕಾ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಅಮೆರಿಕ ಮೂಲದ Linde Advanced Material Technologies (LAMT) ಕರ್ನಾಟಕದಲ್ಲಿ ₹500 ಕೋಟಿಗೂ ಅಧಿಕ ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್‌ಗಳಿಗೆ ಅಗತ್ಯವಾದ Sputtering Targets ತಯಾರಿಕಾ ಘಟಕ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.ಈ ಸಂಬಂಧ ಸಂಸ್ಥೆಯ ಹಿರಿಯ ಅಧಿಕಾರಿಗಳ ನಿಯೋಗದೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದು, ಸೆಮಿಕಂಡಕ್ಟರ್ ಚಿಪ್ ಗಳ ತಯಾರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅತ್ಯುನ್ನತ ಶುದ್ಧತೆಯ (High-Purity) ವಸ್ತುಗಳ ಉತ್ಪಾದನೆಗೆ ಸಂಬಂಧಿಸಿದ ಈ ಯೋಜನೆಯು ಭಾರತದಲ್ಲಿ ಆಮದು ಅವಲಂಬನೆಯನ್ನು ತಗ್ಗಿಸಿ, ದೇಶೀಯ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಲಿದೆ.ಉತ್ತರ ಅಮೆರಿಕ, ಯುರೋಪ್ ಹಾಗೂ ಏಷ್ಯಾದಾದ್ಯಂತ 12 ದೇಶಗಳಲ್ಲಿ 35 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, LAMT, ಸೆಮಿಕಂಡಕ್ಟರ್‌ಗಳು, ಏರೋಸ್ಪೇಸ್, ಆಟೋಮೊಬೈಲ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನ ವಲಯಗಳಿಗೆ ಅಗತ್ಯವಾದ ಸುಧಾರಿತ ವಸ್ತುಗಳು ಹಾಗೂ PVD Sputtering Target ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದೆ. ಕರ್ನಾಟಕದ ಬಲಿಷ್ಠ ಸೆಮಿಕಂಡಕ್ಟರ್ ವಿನ್ಯಾಸ, ಎಲೆಕ್ಟ್ರಾನಿಕ್ಸ್ ಹಾಗೂ ಸುಧಾರಿತ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಪರಿಚಯಿಸಿ, ಈ ಯೋಜನೆಗೆ ಅಗತ್ಯವಿರುವ ಎಲ್ಲ ಸಹಕಾರಗಳನ್ನು ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರು.ಜಾಗತಿಕ ಹೂಡಿಕೆಗಳಿಗೆ ವಿಶ್ವಾಸಾರ್ಹ ತಾಣವಾಗಿ ಕರ್ನಾಟಕವನ್ನು ರೂಪಿಸುವುದರ ಜೊತೆಗೆ, ಭವಿಷ್ಯದ ತಂತ್ರಜ್ಞಾನಗಳ ಉತ್ಪಾದನಾ ಸರಪಳಿಯಲ್ಲಿ ರಾಜ್ಯವನ್ನು ಪ್ರಮುಖ ಶಕ್ತಿಯನ್ನಾಗಿ ಬೆಳೆಸುವ ನಮ್ಮ ಸಂಕಲ್ಪಕ್ಕೆ LAMT ಪ್ರಸ್ತಾವನೆ ಮತ್ತಷ್ಟು ಬಲ ನೀಡಲಿದೆ ಎಂದು ತಿಳಿಸಿದರು.
ಸಂಬಂಧಿತ ಸುದ್ದಿಗಳು

ಸ್ವದೇಶಿ ಎಐ ಮಾಡೆಲ್ ‘ಚ್ಯಾರಿಯೆಟ್-1’ (Chariot-1) ಲೋಕಾರ್ಪಣೆ: 10 ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಣೆ
ನವದೆಹಲಿ : ಭಾರತದಲ್ಲಿ ಸ್ವದೇಶಿ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ಚ್ಯಾರಿಯೆಟ್-1’ (…
◷ 25/11/2026
ಟೋಕಿಯೊದ ನಗರಾಭಿವೃದ್ಧಿ ಮಾದರಿಯ ಅಧ್ಯಯನ: ರಾಜ್ಯದ ನಗರಗಳ ಭವಿಷ್ಯದ ಅಭಿವೃದ್ಧಿಗೆ ಹೊಸ ಚಿಂತನೆ!
ಟೋಕಿಯೋ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ನನ್ನನ್ನು ಒಳಗೊಂಡ ಕರ್ನಾಟಕದ ನಿಯೋಗವು ಟೋಕಿಯೊದ ಪ್ರಸಿದ್ಧ Toky…
◷ 25/11/2026
29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮ್ಮಿಟ್ 2026’ಕ್ಕೆ ಚಾಲನೆ
ಬೆಂಗಳೂರು: ಜಾಗತಿಕ ಪ್ರತಿಭೆ, ನವೀನ ಆಲೋಚನೆಗಳು ಮತ್ತು ತಂತ್ರಜ್ಞಾನದ ಆವಿಷ್ಕಾರಗಳ ಸಂಗಮವಾಗಿರುವ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ …
◷ 17/11/2026
ಕರ್ನಾಟಕದ ಏರೋಸ್ಪೇಸ್ ವಲಯಕ್ಕೆ ಜಾಗತಿಕ ರೆಕ್ಕೆ; ಕಾಲಿನ್ಸ್ ಏರೋಸ್ಪೇಸ್ ಸಂಸ್ಥೆಯ ದೇಶದ ಮೊದಲ MRO ಘಟಕಕ್ಕೆ ಭೂಮಿಪೂಜೆ
ಬೆಂಗಳೂರು : ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ನಲ್ಲಿ ಜಾಗತಿಕ ಖ್ಯಾತಿಯ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ಭಾರತದಲ್ಲೇ ತನ್ನ ಮೊದಲ ವಿಮ…
◷ 17/11/2026
